ಕರ್ನಾಟಕ

karnataka

ETV Bharat / state

ಸರ್ಕಾರಿ ನೌಕರರ ಸಂಘದ ಅಧ್ಯಕ್ಷನ ಕಾರಿಗೆ ದ್ವಿತೀಯ ದರ್ಜೆ ಸಹಾಯಕ ಬಲಿ - chikkaballapur accident

ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತಿದ್ದ 56 ವರ್ಷದ ಸುರೇಶ್, ಅನ್ಯ ಕೆಲಸದ ನಿಮಿತ್ತ ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದಾಗ ವೇಗವಾಗಿ ಬಂದ ಜನಾರ್ದನ್ ರೆಡ್ಡಿ ಕಾರು ಡಿಕ್ಕಿ ಹೊಡೆದಿದೆ..

ಇನ್ನೋವಾ ಕಾರಿಗೆ ಬೈಕ್​ ಡಿಕ್ಕಿ
ಇನ್ನೋವಾ ಕಾರಿಗೆ ಬೈಕ್​ ಡಿಕ್ಕಿ

By

Published : Apr 8, 2022, 10:13 AM IST

ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಕಚೇರಿ ಸಮೀಪವಿರುವ ಇಂಡಿಯನ್ ಪೆಟ್ರೋಲ್ ಬಂಕ್ ಮುಂಭಾಗ ಬೈಕ್ ಮತ್ತು ಇನ್ನೋವಾ ಕಾರು ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುರೇಶ್ (56) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.

ಚಿಂತಾಮಣಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜನಾರ್ದನ್ ರೆಡ್ಡಿಯೊಂದಿಗೆ ಮೂವರು ಇನ್ನೋವಾ ಕಾರಿನಲ್ಲಿ ಚಿಂತಾಮಣಿಯಿಂದ ಚಿಕ್ಕಬಳ್ಳಾಪುರ ನಗರಕ್ಕೆ ಹೋಗುತ್ತಿದ್ದರು.

ಇದೇ ವೇಳೆ ದೊಡ್ಡಬಳ್ಳಾಪುರದ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತಿದ್ದ 56 ವರ್ಷದ ಸುರೇಶ್, ಅನ್ಯ ಕೆಲಸದ ನಿಮಿತ್ತ ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದಾಗ ವೇಗವಾಗಿ ಬಂದ ಜನಾರ್ದನ್ ರೆಡ್ಡಿ ಕಾರು ಡಿಕ್ಕಿ ಹೊಡೆದಿದೆ.

ಇನ್ನೋವಾ ಕಾರಿಗೆ ಬೈಕ್​ ಡಿಕ್ಕಿ..

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ಮೃತ ಪಟ್ಟ ವ್ಯಕ್ತಿ

ABOUT THE AUTHOR

...view details