ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕು ಸೋಮಲಾಪುರ ಹತ್ತಿರ ನೂತನವಾಗಿ ನಿರ್ಮಾಣವಾಗುತ್ತಿರುವ ಕೆರೆಯ ಕಾಮಗಾರಿಯನ್ನು ಇಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿಯವರು ಪರಿಶೀಲನೆ ನಡೆಸಿದ್ದಾರೆ.
ನೂತನ ಕೆರೆ ನಿರ್ಮಾಣ : ಎಸ್. ಎನ್. ಸುಬ್ಬಾರೆಡ್ಡಿ ಭೇಟಿ, ಪರಿಶೀಲನೆ... - ಗುಡಿಬಂಡೆ ತಾಲೂಕು ಸೋಮಲಾಪುರ ಹತ್ತಿರ ನೂತನವಾಗಿ ನಿರ್ಮಾಣವಾಗುತ್ತಿರುವ ಕೆರೆ
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಸೋಮಲಾಪುರ ಹತ್ತಿರ ನೂತನವಾಗಿ ನಿರ್ಮಾಣವಾಗುತ್ತಿರುವ ಕೆರೆಯ ಕಾಮಗಾರಿಯನ್ನು ಇಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿಯವರು ಪರಿಶೀಲನೆ ನಡೆಸಿದರು.
ನೂತನ ಕೆರೆ ನಿರ್ಮಾಣ : ಎಸ್. ಎನ್. ಸುಬ್ಬಾರೆಡ್ಡಿ ಭೇಟಿ, ಪರಿಶೀಲನೆ...
ಉಲ್ಲೋಡು ಪಂಚಾಯಿತಿ ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ 2018-19ನೇ ಸಾಲಿನಲ್ಲಿ ಸುಮಾರು 2.50 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಡಿ ಗುಡಿಬಂಡೆ ತಾಲೂಕು ಸೋಮಲಾಪುರದ ಸುಬ್ಬರಾಯನ ಕೆರೆಯನ್ನು ನಿರ್ಮಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಎಸ್. ಎನ್. ಸುಬ್ಬಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದು, ಗುಣಮಟ್ಟದ ಸಾಮಗ್ರಿಗಳನ್ನು ಹಾಕಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಶಾಸಕರು ತಿಳಿಸಿದ್ದಾರೆ.