ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಿನೇ ದಿನೇ ಖಾಸಗಿ ಬಸ್ ಸೇರಿದಂತೆ ಗೂಡ್ಸ್ ಗಾಡಿಗಳ ಅಟ್ಟಹಾಸವನ್ನು ನಿಯಂತ್ರಿಸಲು ರಸ್ತೆಗಿಳಿದ ಸಾರಿಗೆ ಅಧಿಕಾರಿಗಳು ಪರವಾನಗಿ ಹಾಗೂ ನಿಯಮ ಮೀರಿ ಸಂಚರಿಸುತ್ತಿದ್ದ ಗೂಡ್ಸ್ ಗಾಡಿಯೊಂದನ್ನು ಸೀಜ್ ಮಾಡಿದ್ದಾರೆ.
ಗೂಡ್ಸ್ ಗಾಡಿ ಸೀಜ್ ಮಾಡಿದ ಆರ್ಟಿಒ ಅಧಿಕಾರಿಗಳು - ಚಿನ್ನಸಂದ್ರ ಬೈಪಾಸ್ ರಸ್ತೆ
ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಎಲ್ಲಾ ತರಹದ ವಾಹನಗಳು ಓಡಾಟ ನಡೆಸುವುದು ಸಹಜ. ಆದರೆ ಪರವನಗಿ ಇಲ್ಲದ ಖಾಸಗಿ ವಾಹನಗಳು, ಬಸ್, ಗೂಡ್ಸ್ ವಾಹನಗಳನ್ನು ನಿಯಂತ್ರಿಸಲು ಆರ್ಟಿಒ ಅಧಿಕಾರಿಗಳು ಪಣ ತೊಟ್ಟಿದ್ದು, ಇಂದು ಫೀಲ್ಡ್ಗಿಳಿದು ಗೂಡ್ಸ್ ಗಾಡಿಯೊಂದನ್ನು ಸೀಜ್ ಮಾಡಿದ್ದಾರೆ.
ಬೆಂಗಳೂರಿನಿಂದ ಚಿಂತಾಮಣಿ, ಮುರುಗಮಲ್ಲ, ಆಂಧ್ರ ಪ್ರದೇಶ ಕಡೆಗೆ ಚಿಂತಾಮಣಿ ಹೊರವಲಯದ ಚಿನ್ನಸಂದ್ರ ಬೈಪಾಸ್ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳ ತಪಾಸಣೆ ನಡೆಸಿ, ದಾಖಲೆ ಇಲ್ಲದ ವಾಹನವೊಂದನ್ನು ಸೀಜ್ ಮಾಡಿ ವಶಪಡಿಸಿಕೊಂಡಿದ್ದಾರೆ.
ಚಿಂತಾಮಣಿಯಲ್ಲಿ ತೆರಿಗೆ ಮತ್ತು ಇನ್ನಿತರ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಬಗ್ಗೆ ಮೇಲಾಧಿಕಾರಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಇಂದು ಸಾರಿಗೆ ಇಲಾಖೆಯ ಅಧಿಕಾರಿ ಗೋಪಿಕೃಷ್ಣ ಕಾರ್ಯಾಚರಣೆ ನಡೆಸಿ ಗೂಡ್ಸ್ ಗಾಡಿಗಳನ್ನು ಸೀಜ್ ಮಾಡಿದ್ರು. ಅಷ್ಟೇ ಅಲ್ಲ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.