ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಚ್.ಡಿ. ಮಂಜುನಾಥ್ ನೇತೃತ್ವದಲ್ಲಿ ನಗರದಲ್ಲಿ ಬೈಕ್ ವೀಕ್ಷಣೆ ಮತ್ತು ಬೈಕ್ಗಳ ನಂಬರ್ ಪ್ಲೇಟ್ ಮೇಲೆ ಇರುವ ಸಂಘ ಸಂಸ್ಥೆಗಳ ನೇಮ್ ಪ್ಲೇಟ್ಗಳು, ಚಿಹ್ನೆಗಳು, ಇತರೆ ಬೋರ್ಡ್ಗಳನ್ನು ತೆರವುಗೊಳಿಸಲಾಯಿತು.
ಬೈಕ್ನ ನಂಬರ್ ಪ್ಲೇಟ್ ಮೇಲೆ ಚಿಹ್ನೆ, ಹೆಸರುಗಳಿದ್ರೆ ಈಗ್ಲೇ ತೆಗೆದುಬಿಡಿ.. - Bike Name Plate Remove
ಚಿಕ್ಕಬಳ್ಳಾಪುರ ನಗರದಲ್ಲಿಂದು ಬೈಕ್ಗಳ ತಪಾಸಣೆ ನಡೆಸಿ, ನಂಬರ್ ಪ್ಲೇಟ್ ಮೇಲಿನ ಚಿಹ್ನೆ, ಇತರೆ ಹೆಸರುಗಳನ್ನು ತೆರವುಗೊಳಿಸಲಾಯಿತು.

ಬೈಕ್ ನೇಮ್ ಪ್ಲೇಟ್
ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಚ್.ಡಿ. ಮಂಜುನಾಥ್
ಇದೇ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಚ್.ಡಿ. ಮಂಜುನಾಥ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ನಾವು ಮತ್ತು ನಮ್ಮ ತಂಡ ಕಾರ್ಯನಿರ್ವಹಿಸುತ್ತಿದ್ದೇವೆ. ಚಿಕ್ಕಬಳ್ಳಾಪುರದ ಜನತೆ ಈ ವಿಚಾರ ಗಮನದಲ್ಲಿಟ್ಟುಕೊಂಡು, ಮೋಟಾರು ವಾಹನಗಳ ಮೇಲೆ ಚಿಹ್ನೆಗಳು ಮತ್ತು ಹೆಸರುಗಳು ಇದ್ದರೆ ತಕ್ಷಣ ತೆಗೆಯಬೇಕು, ಇಲ್ಲದಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ವಾಹನ ನಿರೀಕ್ಷಕರಾದ ಗೋಪಿಕೃಷ್ಣ ಹಾಗೂ ನಾಗರಾಜ್ ಭಾಗಿಯಾಗಿದ್ದರು.