ಸರ್ಕಾರಿ ಜಾಬ್ ಸಿಗುವವರೆಗೂ ಉಚಿತ ತರಬೇತಿ ಎಂದು ಎಗರಿಸಿದ್ದು ಎಷ್ಟು ಗೊತ್ತಾ..!
ಚಿಂತಾಮಣಿ ನಗರದ ಚೇಳೂರ ವೃತ್ತದ ಬಳಿ ಇರುವ 'ಟರ್ನಿಂಗ್ ಪಾಯಿಂಟ್ ಸಂಸ್ಥೆ'ಯು 200ಕ್ಕೂ ಅಧಿಕ ಅಭ್ಯರ್ಥಿಗಳು, ತರಬೇತಿದಾರರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದು, ನ್ಯಾಯ ನೀಡುವಂತೆ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಬಹುಕೋಟಿ ರೂಪಾಯಿ ಹಗರಣಗಳಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿರುವ ವಿಷಯಗಳು ನಮ್ಮ ಕಣ್ಣ ಮುಂದಿವೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವುದಾಗಿ ಹೇಳಿ ₹ 24 ಲಕ್ಷ ಲಪಟಾಯಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹೌದು, ಜಿಲ್ಲೆಯ ಚಿಂತಾಮಣಿ ನಗರದ ಚೇಳೂರ ವೃತ್ತದ ಬಳಿ ಇರುವ 'ಟರ್ನಿಂಗ್ ಪಾಯಿಂಟ್ ಸಂಸ್ಥೆ'ಯವರು 200ಕ್ಕೂ ಅಧಿಕ ಅಭ್ಯರ್ಥಿಗಳು, ತರಬೇತಿದಾರರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದೆ. ಬ್ಯಾಕಿಂಗ್ ಸೇರಿದಂತೆ ವಿವಿಧ ಸರ್ಕಾರಿ ಉದ್ಯೋಗಗಳಿಗೆ ತರಬೇತಿ ನೀಡಲಾಗುವುದೆಂದು ಹೇಳಿದ್ದ ಸಂಸ್ಥೆ ಈಗ ಬೀಗ ಜಡಿದಿದೆ.