ಚಿಕ್ಕಬಳ್ಳಾಪುರ :ಜಿಲ್ಲೆಯ ಮಳ್ಳೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಳ್ಳತನವಾಗಿದೆ.
ಮಳ್ಳೂರು ಗ್ರಾಮಪಂಚಾಯ್ತಿ ಕಚೇರಿಯಲ್ಲಿ ಕಳ್ಳತನ ಗ್ರಾಮ ಪಂಚಾಯತ್ ಕಚೇರಿಯಲ್ಲಿದ್ದ ಕೆಲಸ ಮುಗಿಸಿ ಸಂಜೆ ಗುಮಾಸ್ತ ಭದ್ರವಾಗಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದ. ಆದರೆ, ಬೆಳಗ್ಗೆ ಗ್ರಾಮ ಪಂಚಾಯತ್ ಕಚೇರಿ ಬೀಗ ತೆಗೆಯಲು ಬಂದಾಗ ಗುಮಾಸ್ತನಿಗೆ ಶಾಕ್ ಕಾದಿತ್ತು.
ಹಾಕಿದ್ದ ಬೀಗ ನಾಪತ್ತೆಯಾಗಿತ್ತು. ಕಚೇರಿಯ ಒಳಗಡೆ ವೈಯರ್ಗಳು ತುಂಡಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎರಡು ಬ್ಯಾಟರಿ, ಸಿಸಿ ಕ್ಯಾಮೆರಾ ಡಿವಿಆರ್ ಸೇರಿದಂತೆ ಹಲವು ವಸ್ತುಗಳನ್ನು ಕದ್ದ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಇನ್ನು ಇತ್ತೀಚೆಗೆ ಕಾರು, ಬಸ್, ಲಾರಿಗಳು ಸೇರಿದಂತೆ ಸಣ್ಣಪುಟ್ಟ ವಾಹನಗಳಲ್ಲಿ ಬ್ಯಾಟರಿಗಳನ್ನು ಕದಿಯುತಿದ್ದ ಕಳ್ಳರ ಕಣ್ಣು ಈಗ ಗ್ರಾಮ ಪಂಚಾಯತ್‌ಗಳ ಮೇಲೆ ಬಿದ್ದಿದೆ. ಈ ಹಿಂದೆ ಇದೇ ರೀತಿ ಬ್ಯಾಟರಿ, ಯುಪಿಎಸ್‌ಗಳನ್ನು ಕದಿಯುತಿದ್ದ ಹಳೇ ಬ್ಯಾಚ್ ಇರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.
ಮಳ್ಳೂರು ಗ್ರಾಮ ಪಂಚಾಯತ್‌ನಲ್ಲಿ ಕೇವಲ ಬ್ಯಾಟರಿ, ಡಿವಿಆರ್ ಕದ್ದಿದ್ದಾರೋ ಅಥವಾ ಆಫೀಸ್ಗೆ ಸಂಬಂಧಿಸಿದ ಪ್ರಮುಖ ಕಡತಗಳು ಕಳವಾಗಿದೆಯೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ರೈತರ ಹೊಲಗಳ ಬಳಿ ಪಂಪು, ಮೋಟರ್ ಕೇಬಲ್ಗಳು ಕಳ್ಳತನವಾಗುತ್ತಿದ್ದವು. ಈಗ ಸರ್ಕಾರಿ ಕಚೇರಿಗಳಲ್ಲಿ ಕಳ್ಳತನ ನಡೆದಿದೆ.
ಓದಿ:ಐಪಿಎಲ್ ಮೆಗಾ ಹರಾಜು ವೇಳೆ ದುರ್ಘಟನೆ.. ಕುಸಿದು ಬಿದ್ದ ಆ್ಯಕ್ಷನರ್ ಹಗ್ ಎಡ್ಮೀಡ್ಸ್