ಕರ್ನಾಟಕ

karnataka

ETV Bharat / state

ಬೈಕ್​​ಗೆ ಕಾರು ಡಿಕ್ಕಿ: ಸವಾರರಿಬ್ಬರ ಕಾಲುಗಳು ಕಟ್​​! - ಚಿಕ್ಕಬಳ್ಳಾಪುರ ಕ್ರೈಮ್​ ಲೆಟೆಸ್ಟ್ ನ್ಯೂಸ್

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಸವಾರರಿಬ್ಬರ ಕಾಲು ಮುರಿದಿರುವ ಘಟನೆ ನಡೆದಿದೆ.

Road accident
ವಾಹನ ಸವಾರರಿಗೆ ಕಾಲು ತುಂಡು

By

Published : Jul 13, 2020, 10:59 AM IST

ಚಿಕ್ಕಬಳ್ಳಾಪುರ:ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಸವಾರರಿಬ್ಬರ ಕಾಲು ಮುರಿದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ.

ತಾಲೂಕಿನ ಮಾರ್ಗಾನಕುಂಟೆ ಗ್ರಾಮದ ಸುಭಾನ್ ಸಾಬ್ (55) ಮತ್ತು ರಾಮನೊಡ್ಡಂಪಲ್ಲಿ (ಕೊತ್ತಪಲ್ಲಿ) ಗ್ರಾಮದ ಬಾಬು (56) ಕಾಲು ಮುರಿದುಕೊಂಡಿರುವ ವ್ಯಕ್ತಿಗಳು. ಇವರು ಕೆಲಸ ಮುಗಿಸಿಕೊಂಡು ತಮ್ಮ ಊರಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಆಂಬ್ಯುಲೆನ್ಸ್​ ಮೂಲಕ ಚಿಕಿತ್ಸೆಗಾಗಿ ಸ್ಥಳೀಯರು ಬೆಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details