ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ಹೆದ್ದಾರಿ ಪಕ್ಕದ ಹೋಟೆಲ್​ಗೆ ನುಗ್ಗಿದ ಕ್ಯಾಂಟರ್: ಗರ್ಭದಲ್ಲಿದ್ದ ಶಿಶು ಸೇರಿ ಮೂವರು ಸಾವು - road accident in chikkaballapur

ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 44ರ ಪಕ್ಕದ ಪ್ರವೀಣ್ ಹೋಟೆಲ್ ಬಳಿ ತಿಂಡಿ ಸವಿಯಲು ಬಂದಿದ್ದ ಪ್ರಯಾಣಿಕರಿಗೆ ಯಮರಾಯ ಶಾಕ್ ಕೊಟ್ಟಿದ್ದಾನೆ. ನಿಂತಿದ್ದ ಬೈಕ್ ಮತ್ತು ಕಾರುಗಳಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

road accident in chikkaballapur
ಹೆದ್ದಾರಿ ಪಕ್ಕದ ಹೋಟೆಲ್​ಗೆ ನುಗ್ಗಿದ ಕ್ಯಾಂಟರ್

By

Published : Sep 17, 2022, 12:46 PM IST

Updated : Sep 17, 2022, 1:01 PM IST

ಚಿಕ್ಕಬಳ್ಳಾಪುರ: ನಿಂತಿದ್ದ ಬೈಕ್ ಮತ್ತು ಕಾರುಗಳಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಗರ್ಭದಲ್ಲಿದ್ದ ಕಂದಮ್ಮ ಸೇರಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ.

ಹೋಟೆಲ್ ಭದ್ರತಾ ಸಿಬ್ಬಂದಿ ನಾರಾಯಣಸ್ವಾಮಿ ಹಾಗೂ ಬೈಕ್ ಸವಾರ ಜನಾರ್ಧನ ಮೃತರು. ಈ ಸರಣಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಯಗೊಂಡ ನಾಲ್ವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಡ್ಡಬಂದ ಕಾರನ್ನು ತಪ್ಪಿಸಲು ಹೋಗಿ ಕ್ಯಾಂಟರ್ ಚಾಲಕ ನಿಯಂತ್ರಣ ಕಳೆದುಕೊಂಡು ಮುಂದೆ ನಿಂತಿದ್ದ ಬೈಕ್​, ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗ್ತಿದೆ.

ಬೈಕ್ ಮತ್ತು ಕಾರುಗಳಿಗೆ ಕ್ಯಾಂಟರ್ ಡಿಕ್ಕಿ

ಇದನ್ನೂ ಓದಿ:ಬಸ್​ಗೆ ಟ್ರಕ್ ಡಿಕ್ಕಿ.. 5 ಸಾವು, 17 ಮಂದಿಗೆ ಗಾಯ

ಇನ್ನು, ಘಟನೆಯಿಂದ ಗರ್ಭಿಣಿಯೊಬ್ಬರು ಗಂಭೀರ ಗಾಯಗೊಂಡಿದ್ದು, ಗರ್ಭಾವಸ್ಥೆಯಲ್ಲಿದ್ದ ಮಗು ಮೃತಪಟ್ಟಿದೆ. ಮತ್ತೊಂದು ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಈ ಕುರಿತು ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್​ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ಯಾಂಟರ್​ ಚಾಲಕ ಅಜೀತ್‌ನನ್ನು ಬಂಧಿಸಿ ವಾಹನ ವಶಪಡಿಸಿಕೊಳ್ಳಲಾಗಿದೆ. ​ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾರನ್ನು 2 ಕಿಮೀ ದೂರ ಎಳೆದೊಯ್ದ ಕಂಟೈನರ್​: ಭಯಾನಕ ವಿಡಿಯೋ

Last Updated : Sep 17, 2022, 1:01 PM IST

ABOUT THE AUTHOR

...view details