ಚಿಕ್ಕಬಳ್ಳಾಪುರ:ವಿಶೇಷ ಚೇತನ ಮಹಿಳೆಗೆ ನಾನು ಯಾವುದೇ ಮಾತು ಕೊಟ್ಟಿಲ್ಲ ಹಾಗೂ ಮೋಸವನ್ನೂ ಮಾಡಿಲ್ಲ ಎಂದು ನರೇಂದ್ರ ಎಂಬಾತ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
ಗಂಡನಿಗೆ ಡೈವೋರ್ಸ್ ಕೊಡಿಸಿ ನಂಬಿಸಿ ಮೋಸ.. ಆದರೆ, ನಾನನವನಲ್ಲ ಅಂತಾವ್ನೇ ಅವನು.. - ಚಿಂತಾಮಣಿ ತಾಲೂಕಿನ ತುಳುವನೂರು
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ತುಳುವನೂರು ಗ್ರಾಮದ ಡಿಎಸ್ಎಸ್ ಮುಖಂಡನ ಮಗ ನರೇಂದ್ರನ ಮೇಲೆ ಮಹಿಳೆ ಮಾಡಿದ ಆರೋಪಗಳು ಸುಳ್ಳು ಎಂದು ಆರೋಪಿತ ವ್ತಕ್ತಿ ನರೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದ ವೆಂಕಟಗಿರಿಕೋಟೆ ನಿವಾಸಿ ವಿಶೇಷ ಚೇತನ ಮಹಿಳೆಯೊಬ್ಬರು, ಚಿಂತಾಮಣಿ ತಾಲೂಕಿನ ತುಳವನೂರು ಗ್ರಾಮದ ಡಿಎಸ್ಎಸ್ ಮುಖಂಡರ ಮಗ ನರೇಂದ್ರ ಎಂಬ ವ್ಯಕ್ತಿ ಮೋಸ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಹರಿಬಿಟ್ಟಿದ್ದರು. ನನ್ನ ಜೊತೆನರೇಂದ್ರಸ್ನೇಹವನ್ನು ಬೆಳೆಸಿಕೊಂಡರು. ನನ್ನ ಪತಿಯಿಂದ ವಿಚ್ಛೇದನಕೊಡಿಸಿ, ಮದುವೆಯಾಗುವುದಾಗಿ ಹೇಳಿದ್ದರು. ನನ್ನ ಮಗನ ಮುಂದೆಯೇ ತಾಳಿ ಕಟ್ಟಿ ಕೆಲಕಾಲ ದೇವಾಲಯ, ಪಾರ್ಕ್ಗಳನ್ನೂ ಸುತ್ತಾಡಿಸಿದ್ದರು. ಈಗ ಮೋಸ ಮಾಡಿ ಹಣ, ಒಡವೆಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ನೊಂದ ಮಹಿಳೆಯೊಬ್ಬರು ಆರೋಪಿಸಿದ್ದರು.
ಆದರೆ, ನರೇಂದ್ರ ಮಾತ್ರ ಬೇರೆಯದ್ದೇ ರೀತಿ ಹೇಳುತ್ತಿದ್ದಾರೆ. ಮನೆಯ ಪಕ್ಕದಲ್ಲೇ ಇದ್ದ ಕಾರಣ ಅವರ ಮಗುವಿಗೆ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಿ, ಸಹಾಯ ಮಾಡಿದ್ದೇನೆ ಅಷ್ಟೇ.. ಫೋಟೋಗಳನ್ನು ಎಡಿಟ್ ಮಾಡಿಸಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆಂದು ನರೇಂದ್ರ ಪ್ರತ್ಯಾರೋಪ ಮಾಡ್ತಿದ್ದಾರೆ.ಒಂದು ಕಡೆ ಮಹಿಳೆ ನನಗೆ ಅನ್ಯಾಯವಾಗಿದೆ ಎಂದು ಗೋಗರಿಯುತ್ತಿದ್ದಾರೆ. ಮತ್ತೊಂದು ಕಡೆ ಸುಳ್ಳು ಆರೋಪಗಳನ್ನು ನನ್ನ ಮೇಲೆ ಹೇಳುತ್ತಿದ್ದಾರೆಂದು ನರೇಂದ್ರ ಪ್ರತ್ಯಾರೋಪ ಮಾಡುತ್ತಿದ್ದಾರೆ. ನಿಜಾಂಶಗಳೇನು ಎಂಬುದನ್ನು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.