ಚಿಕ್ಕಬಳ್ಳಾಪುರ: ಇ-ಖಾತೆ ಮಾಡಿಕೊಡಲು 50 ಸಾವಿರ ಹಣಕ್ಕೆ ಬೇಡಿಕೆಯಿಟ್ಟ ಸ್ಥಳೀಯ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 5ನೇ ವಾರ್ಡ್ ನಿವಾಸಿ ಬಾಲಾಜಿ ಎಂಬ ವ್ಯಕ್ತಿಯು ತಮಗೆ ಸೇರಿದ 8 ನಿವೇಶನಗಳಿಗೆ ಸಂಬಂಧಿಸಿದ ಇ- ಖಾತೆಗಳನ್ನು ಮಾಡಿಕೊಡಲು ಅರ್ಜಿ ಹಾಕಿದ್ದರು. ಆದರೆ ಇ- ಖಾತೆ ಮಾಡಿಕೊಡಲು ಪ.ಪಂ.ಮುಖ್ಯಾಧಿಕಾರಿ ನಾಗರಾಜು ಸುಮಾರು 50 ಸಾವಿರ ರೂಪಾಯಿಗಳಿಗೆ ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ಬಾಲಾಜಿ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಮುಖ್ಯಾಧಿಕಾರಿ ನಾಗರಾಜ್‍ಗೆ 25 ಸಾವಿರ ಹಣ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.