ಚಿಕ್ಕಬಳ್ಳಾಪುರ:ಗೌರಿಬಿದನೂರು ನಗರದ ಭಾರತ ಮಾತಾ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಡಾ.ಕೆ ಸುಧಾಕರ್ ಚಾಲನೆ ನೀಡಿದರು.
ಗೌರಿಬಿದನೂರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಕೆ. ಸುಧಾಕರ್ - Bharat Mata Temple
ಗೌರಿಬಿದನೂರು ನಗರದ ಭಾರತ ಮಾತಾ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಡಾ.ಕೆ ಸುಧಾಕರ್ ಚಾಲನೆ ನೀಡಿದರು.
ತಾಲೂಕು ಬಿಜೆಪಿ ಘಟಕದ ವತಿಯಿಂದ ಶಾಸಕರಿಗೆ ಮಾಜಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಸದಸ್ಯ ಎನ್.ಎಂ ರವಿನಾರಾಯಣ ರೆಡ್ಡಿ ಅದ್ಧೂರಿಯಾಗಿ ಸ್ವಾಗತ ಕೋರಿದರು. ಬಳಿಕ ಸುಮಾರು ಒಂದು ಸಾವಿರದಷ್ಟು ದ್ವಿಚಕ್ರ ವಾಹನಗಳ ಬೃಹತ್ ಮೆರವಣಿಗೆ ಮೂಲಕ ನಾಗಸಂದ್ರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಕಳೆದ ವರ್ಷ ನವೆಂಬರ್ನಲ್ಲಿ ನಡೆದಂತ ಉಪಚುನಾವಣೆ ಕದನದಲ್ಲಿ ಮಾಜಿ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿ, ಶಾಸಕ ಕೆ.ಸುಧಾಕರ್ ಅವರನ್ನು ಸೋಲಿಸಲು ಪಣ ತೊಟ್ಟಿದ್ದರು. ಆದರೆ ಚುನಾವಣೆ ಫಲಿತಾಂಶ ಬಂದಾಗ ಅತಿ ಹೆಚ್ಚು ಮತಗಳಿಂದ ಗೆದ್ದ ಸುಧಾಕರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಗೆದ್ದ ಬಳಿಕ ಶಿವಶಂಕರರೆಡ್ಡಿ ಸ್ವಗ್ರಾಮವಾದ ಎಚ್. ನಾಗಸಂದ್ರಕ್ಕೆ ಡಾ.ಕೆ ಸುಧಾಕರ್ ಮೊದಲ ಬಾರಿಗೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಗೌರಿಬಿದನೂರು ರಾಜಕೀಯದಲ್ಲಿ ಚದುರಂಗದ ಆಟ ಆಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗ್ತಿದೆ.