ಚಿಕ್ಕಬಳ್ಳಾಪುರ: ಹಳೆಯ ದ್ವೇಷದ ಹಿನ್ನೆಲೆ ಮನೆ ಕಟ್ಟುವ ವಿಚಾರದಲ್ಲಿ ಸಂಬಂಧಿಕರು ಬಡಿದಾಡಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಲಕನೇರ್ಪು ಗ್ರಾಮದಲ್ಲಿ ನಡೆದಿದೆ.
ಮನೆ ಕಟ್ಟುವ ವಿಚಾರದಲ್ಲಿ ಸಂಬಂಧಿಕರ ನಡುವೆ ಮಾರಾಮಾರಿ: ಹಲವರಿಗೆ ಗಾಯ - ಚಿಕ್ಕಬಳ್ಳಾಪುರದಲ್ಲಿ ಮನೆ ಕಟ್ಟುವ ವಿಚಾರಕ್ಕೆ ಜಗಳ ಸುದ್ದಿ
ಮನೆ ಕಟ್ಟುವ ವಿಚಾರದಲ್ಲಿ ಸಂಬಂಧಿಕರ ನಡುವೆ ಮಾರಾಮಾರಿ ನಡೆದು, ಕೆಲವರು ಆಸ್ಪತ್ರೆ ಸೇರಿರುವ ಘಟನೆ ಚಿಂತಾಮಣಿ ತಾಲೂಕಿನ ಚಿಲಕನೇರ್ಪು ಗ್ರಾಮದಲ್ಲಿ ನಡೆದಿದೆ.
ಸಂಬಂಧಿಕರ ನಡುವೆ ಮಾರಾಮಾರಿ
ಚಿಲಕಲನೇರ್ಪು ಗ್ರಾಮದ ಅನಿಲ್ ಕುಮಾರ್ ಅವರ ಮಾವ ಮತ್ತು ನರಸಿಂಹಪ್ಪ ಕುಟುಂಬದವರಿಗೆ ಮನೆ ಕಟ್ಟುವ ವಿಚಾರದಲ್ಲಿ ಸಾಕಷ್ಟು ತಗಾದೆಗಳು ನಡೆದಿದ್ದವು. ಆದರೆ, ಮತ್ತೆ ಅದೇ ಮನೆ ಕಟ್ಟುವ ವಿಚಾರಕ್ಕೆ ಜಗಳ ಮಾಡಿಕೊಂಡು ಕಳೆದ ಸಂಜೆ ಎರಡು ಕುಟುಂಬದವರು ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದುಕೊಂಡಿದ್ದಾರೆ. ಈ ವೇಳೆ, ಕೆಲವರು ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಕುರಿತು ಕೆಂಚಾರ್ಲಹಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jun 2, 2020, 2:38 PM IST