ಕರ್ನಾಟಕ

karnataka

ETV Bharat / state

ಊಟ ಕೊಡಿಸುವುದಾಗಿ ನಂಬಿಸಿ ಬಾಲಕಿ ಮೇಲೆ ರೇಪ್​: ಕಾಮುಕನಿಗೆ ಕಠಿಣ ಶಿಕ್ಷೆ ವಿಧಿಸಿದ ಚಿಕ್ಕಬಳ್ಳಾಪುರ ಕೋರ್ಟ್​ - ಚಿಕ್ಕಬಳ್ಳಾಪುರ ಸುದ್ದಿ

ಊಟ ಕೊಡಿಸುವುದಾಗಿ ನಂಬಿಸಿ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

rape-on-a-girl-rs-10000-fine-for-accused
ಊಟ ಕೊಡಿಸುವುದಾಗಿ ನಂಬಿಸಿ ಬಾಲಕಿ ರೇಪ್​: ಆರೋಪಿಗೆ ಕಠಿಣ ಶಿಕ್ಷೆ, 10ರೂ. ದಂಡ

By

Published : Jan 9, 2020, 7:38 PM IST

Updated : Jan 9, 2020, 7:49 PM IST

ಚಿಕ್ಕಬಳ್ಳಾಪುರ:ಊಟ ಕೊಡಿಸುವುದಾಗಿ ನಂಬಿಸಿ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬಾಲೇನಹಳ್ಳಿಯ ಸತೀಶ್ ಜುಲೈ 31ರ 2019 ರಂದು 7 ವರ್ಷದ ಬಾಲಕಿಗೆ ಊಟ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ನ್ಯಾಯಾಲಯವು ಅಪರಾಧಿಗೆ 20 ವರ್ಷಗಳ ಕಠಿಣ ಶಿಕ್ಷೆ, ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ಚಿಕ್ಕಬಳ್ಳಾಪುರ ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ನಟರಾಜ್ ಅವರು ಈ ಆದೇಶ ಹೊರಡಿಸಿದ್ದಾರೆ.

ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

Last Updated : Jan 9, 2020, 7:49 PM IST

ABOUT THE AUTHOR

...view details