ಚಿಕ್ಕಬಳ್ಳಾಫುರ :ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಡಿ 7 ಜನರ ವಿರುದ್ದ ದೂರು ದಾಖಲಾಗಿದೆ. ಈ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿ ಮೇಲೆ ನಿರಂತರ ಅತ್ಯಾಚಾರ ಆರೋಪ : 7 ಜನರ ವಿರುದ್ದ ದೂರು ದಾಖಲು - ಮಂಚೇನಹಳ್ಳಿ ಪೊಲೀಸ್ ಠಾಣೆ
ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಡಿ 7 ಜನರ ವಿರುದ್ದ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..
ಅತ್ಯಾಚಾರ ಆರೋಪ
ಬಾಲಕಿ ಗರ್ಭಿಣಿ ಆದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, 7 ಜನ ಕಿರಾತಕರು ಬಾಲಕಿಯನ್ನು ಪುಸಲಾಯಿಸಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೊಡ್ಡಬ್ಯಾಲ್ಯಾ ಗ್ರಾಮದ ನಿವಾಸಿ ಗೌರಿ ಸೇರಿದಂತೆ ಅದ್ದೆಕೊಪ್ಪ ಗ್ರಾಮದ ಮೂರ್ತಿ, ರಾಜೇಶ್, ವಿನೋದ್, ನರಸಿಂಹಮೂರ್ತಿ ಸೇರಿ 7 ಜನರ ವಿರುದ್ಧ ಅತ್ಯಾಚಾರ ಆರೋಪದಡಿ ದೂರು ದಾಖಲಾಗಿದೆ.