ಚಿಕ್ಕಬಳ್ಳಾಪುರ:ಜಿಲ್ಲೆಯ ಗೌರಿಬಿದನೂರು ಮತ್ತು ಚಿಕ್ಕ ಕುರುಗೋಡು ಮಧ್ಯೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ಪಾಸೊಂದು ಭಾರಿ ಮಳೆಗೆ ಜಲಾವೃತವಾಗಿದೆ. ಇದರಿಂದ ಈ ಗ್ರಾಮಗಳ ಮಧ್ಯೆ ಸಂಚರಿಸಲು ರಸ್ತೆ ಇಲ್ಲದಂತಾಗಿದೆ.
ಭಾರಿ ಮಳೆಗೆ ಮುಳುಗಿದ ರೈಲ್ವೆ ಅಂಡರ್ಪಾಸ್: ಅವೈಜ್ಞಾನಿಕ ಕಾಮಗಾರಿ ಆರೋಪ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ರೈಲ್ವೆ ಅಂಡರ್ಪಾಸೊಂದು ಸಂಪೂರ್ಣ ಜಲಾವೃತವಾಗಿದ್ದು, ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಈ ಅವಾಂತರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿನಿತ್ಯ ಚಿಕ್ಕ ಕುರುಗೋಡು ಗ್ರಾಮದಿಂದ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಸಂಚರಿಸಬೇಕು. ಆದರೆ ಅಂಡರ್ ಪಾಸ್ ತುಂಬಿದ್ದರಿಂದ ಇಲ್ಲಿ ಸಂಚರಿಸಲಾಗದೇ ಸಂಕಷ್ಟ ಎದುರಾಗಿದೆ. ಇನ್ನು ನಿನ್ನೆ ಈ ಅಂಡರ್ಪಾಸ್ ಸ್ಥಗಿತಗೊಂಡಿದ್ದರಿಂದ ಹಳ್ಳಿ ದಾಟುವಾಗ ಸೀಮೆ ಹಸುವೊಂದು ರೈಲಿಗೆ ಸಿಲುಕಿ ಸಾವನ್ನಪ್ಪಿದೆ.
ಕಳೆದ ಎರಡು ವರ್ಷಗಳಿಂದಲೂ ಈ ಅಂಡರ್ ಪಾಸ್ ನಿರ್ಮಾಣಕ್ಕೆ ವಿರೋಧವಿದ್ದು, ಇದನ್ನು ವಿರೋಧಿಸಿ ಹಲವು ಪ್ರತಿಭಟನೆ ನಡೆಸಿದರೂ, ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.