ಕರ್ನಾಟಕ

karnataka

ETV Bharat / state

ಪಬ್ ಜಿ ಗೇಮ್ ಈಗ ಕಾಲೇಜಿನಲ್ಲಿ ಪಂದ್ಯಾವಳಿ! ಪೊಲೀಸರಿಂದ ಎಚ್ಚರಿಕೆ - ಕಾಲೇಜಿನಲ್ಲಿ ಯುವಕರು ಪಬ್​ ಜಿ ಪಂದ್ಯಾವಳಿ

ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಯುವಕರು ಪಬ್​ ಜಿ ಪಂದ್ಯಾವಳಿ ಆಯೋಜಿಸಿದ್ರು. ಈ ಕುರಿತು ಮಾಹಿತಿ ಪಡೆದ ಬಾಗೇಪಲ್ಲಿ ಪೊಲೀಸರು ತಕ್ಷಣ ಕಾಲೇಜಿಗೆ ಆಗಮಿಸಿ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.

ಯುವಕರಿಂದ ಪಬ್​ ಜಿ ಪಂದ್ಯಾವಳಿ ಆಯೋಜನೆ

By

Published : Nov 17, 2019, 5:20 PM IST

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಸಮಾರಂಭದ ವೇಳೆ ಯುವಕರು ಪಬ್​​ ಜಿ ಪಂದ್ಯಾವಳಿ ಆಯೋಜಿಸಿದ ಘಟನೆ ನಡೆದಿದೆ.

ಬ್ಲೂವೇಲ್ ನಂತಹ ಡೆಡ್ಲಿ ಗೇಮ್ ಸಾಕಷ್ಟು ಜನರನ್ನು ಆಹುತಿ ಪಡೆದಿತ್ತು. ಆದ್ರೆ ಈಗ ಬಂದಿರುವ ಪಬ್ ಜಿ ಕೂಡ ಬ್ಲೂವೇಲ್‍ನಂತೆ ಡೆಡ್ಲಿ ಗೇಮ್ ಆಗಿ ಮಾರ್ಪಾಡಾಗುತ್ತಿದೆ. ಇತ್ತೀಚೆಗೆ ಪಬ್ ಜಿ ಗೇಮ್​ಗೆ ಲಕ್ಷಗಟ್ಟಲೆ ಜನರು ಅಡಿಕ್ಟ್ ಆಗಿ ಹೋಗಿರುವುದು ಗೊತ್ತಿರುವ ಸಂಗತಿ.

ಈ ಕುರಿತು ಕಾಲೇಜಿನ ಪ್ರಾಂಶುಪಾಲರ ಗಮನ ಸೆಳೆದ ಬಳಿಕ ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಕ್ಷಣ ಕಾಲೇಜಿಗೆ ಆಗಮಿಸಿದ ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಿ ತಾತ್ಕಾಲಿಕವಾಗಿ ಗೇಮ್​​ಗೆ ನಡೆಯೋದಕ್ಕೆ ಕಡಿವಾಣ ಹಾಕಿದ್ದಾರೆ.

ABOUT THE AUTHOR

...view details