ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬನ ಮೇಲೆ ಟೋಲ್ ಸಿಬ್ಬಂದಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಟೋಲ್ ಬಳಿ ನೂರಾರು ಜನ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಜಾತಿ ನಿಂದನೆ ಆರೋಪ: ಟೋಲ್ ಬಳಿ ನೂರಾರು ಜನರಿಂದ ಪ್ರತಿಭಟನೆ - chikballapura latest news '
ಜಾತಿ ನಿಂದನೆ ಆರೋಪದ ಹಿನ್ನೆಲೆ ಟೋಲ್ ಬಳಿ ನೂರಾರು ಜನ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಟೋಲ್ ಬಳಿ ನೂರಾರು ಜನರಿಂದ ಪ್ರತಿಭಟನೆ
ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೀಚಗೊಂಡಹಳ್ಳಿ ಟೋಲ್ ಬಳಿ ಘಟನೆ ಜರುಗಿದೆ. ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಟೋಲ್ನಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ನಂತರ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪೊಲೀಸರು ಸುಂಕ ವಸೂಲಾತಿಯನ್ನು ತಕ್ಷಣ ನಿಲ್ಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
Last Updated : Nov 2, 2020, 5:57 PM IST