ಕರ್ನಾಟಕ

karnataka

ETV Bharat / state

ಜನ ಮೆಚ್ಚಿದ ಡಿಸಿ ವರ್ಗಾವಣೆಗೆ ಖಂಡನೆ... ಚಿಕ್ಕಬಳ್ಳಾಪುರದಲ್ಲಿ ಹೆದ್ದಾರಿ ಬಂದ್ - Aniruddh Shravan, District Collector of Chikkaballapur

ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಅನಿರುದ್ಧ್​ ಶ್ರವಣ್ ಅವರ ದಿಢೀರ್​ ವರ್ಗಾವಣೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿ 7 ಚದಲಪುರ ಗೇಟ್ ಬಳಿ ಹೆದ್ದಾರಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಕೂಡಲೇ ಅನಿರುದ್ಧ್​ ಅವರನ್ನು ಜಿಲ್ಲೆಗೆ ಮರು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ರು.

protest-demanding-transfer-of-chikkaballapur-district-collector

By

Published : Aug 11, 2019, 8:06 AM IST

ಚಿಕ್ಕಬಳ್ಳಾಪುರ:ಜಿಲ್ಲಾಧಿಕಾರಿ ದಿಢೀರ್​ ವರ್ಗಾವಣೆ ಖಂಡಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲಾಧಿಕಾರಿ ಅನಿರುದ್ಧ್​ ಶ್ರವಣ್ ಅವರ ದಿಢಿರ್ ವರ್ಗಾವಣೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿ 7 ಚದಲಪುರ ಗೇಟ್ ಬಳಿ ಕನ್ನಡಪರ, ರೈತಪರ, ಸಂಘಟನೆಗಳಿಂದ ಹೆದ್ದಾರಿಯನ್ನು ತಡೆದು ಕೂಡಲೇ ಜಿಲ್ಲಾಧಿಕಾರಿ ವರ್ಗಾವಣೆಯನ್ನು ರದ್ದುಪಡಿಸುವಂತೆ ಒತ್ತಾಯಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ 7 ಚದಲಪುರ ಗೇಟ್ ಬಂದ್

ಅನಿರುದ್ಧ್​ ಅವರು ಕಳೆದ ವರ್ಷವಷ್ಟೇ ನಮ್ಮ ಜಿಲ್ಲೆಯಲ್ಲಿ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ವರ್ಷ ಕಳೆಯುವುದರೊಳಗಾಗಿ ಜಿಲ್ಲಾಧಿಕಾರಿಯನ್ನು ವರ್ಗಾಹಿಸಿರುವುದು ಜಿಲ್ಲೆಯ ಜನತೆಗೆ ಬೇಸರ ತರಿಸಿದೆ. ಜಿಲ್ಲೆಯಲ್ಲಿ ಅನಿರುದ್ಧ್​ ಅವರು ಸಾಕಷ್ಟು ಅಭಿವೃದ್ಧಿಗೆ ಶ್ರಮಿಸಿದ್ರು. ಅಷ್ಟೇ ಅಲ್ಲದೆ ಸಾರ್ವಜನಿಕರ ಸಂಪರ್ಕಕ್ಕೂ ಸ್ಪಂದಿಸುವ ಮೂಲಕ ಜನರ ಮೆಚ್ಚುಗೆ ಪಡೆದಿದ್ರು.

ಇನ್ನು, ರಾಷ್ಟ್ರೀಯ ಹೆದ್ದಾರಿ 7 ಬಂದ್ ಮಾಡಿದ್ದರಿಂದ ವಾಹನ ಸವಾರರು ಕೆಲಕಾಲ ಪರದಾಟ ನಡೆಸುವಂತಾಯಿತು.

ABOUT THE AUTHOR

...view details