ಕರ್ನಾಟಕ

karnataka

ETV Bharat / state

ಜಿಲ್ಲಾಭಿವೃದ್ಧಿಗೆ ಸರ್ಕಾರ ಆಸಕ್ತಿ ತೋರಿಸುತ್ತಿದ್ದರೂ ಅಧಿಕಾರಿಗಳ ನಿರಾಸಕ್ತಿ: ಶಾಸಕ ಆಕ್ರೋಶ - Swachh Bharat mission

ಗುಡಿಬಂಡೆ ತಾಲೂಕು ಪಟ್ಟಣ ಪಂಚಾಯತ್​ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಎಸ್​​​.ಎನ್​​​ ​​.ಸುಬ್ಬಾರೆಡ್ಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗರಂ ಆದ್ರು.

Progress review meeting
ಪ್ರಗತಿ ಪರಿಶೀಲನೆ ಸಭೆ

By

Published : Dec 25, 2019, 8:13 AM IST

ಗುಡಿಬಂಡೆ:ತಾಲೂಕು ಪಟ್ಟಣ ಪಂಚಾಯತ್​ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಎಸ್​​​.ಎನ್​​​​. ಸುಬ್ಬಾರೆಡ್ಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ರು.

ಜಿಲ್ಲೆ ಹಾಗೂ ತಾಲೂಕು ಮಟ್ಟಕ್ಕೆ ಸೀಮಿತವಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ ) ಪ್ರಗತಿ ಪರಿಶೀಲನೆಯನ್ನು ಇನ್ನು ಮುಂದೆ ಆ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್​ ಮಟ್ಟದಲ್ಲೂ ನಡೆಯಲಿದೆ ಎಂದು ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.

ಇದರೊಂದಿಗೆ ಇಲಾಖಾವಾರು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಅನುದಾನ ಬಳಕೆ ಪ್ರಗತಿ ಕುರಿತು ಗ್ರಾಮ ಪಂಚಾಯತಿಯೂ ಪರಿಶೀಲನೆ ನಡೆಸಬಹುದು ಎಂದರು.

ಪ್ರಗತಿ ಪರಿಶೀಲನೆ ಸಭೆ

ಬರಪೀಡಿತ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಆಸಕ್ತಿ ತೋರಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಯೋಜನೆಗಳ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಸ್ವಚ್ಛ ಭಾರತ ಯೋಜನೆ ಅನುಷ್ಠಾನವಾಗಿ ವಿಶೇಷ ಯೋಜನೆ ರೂಪಿಸಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಬೇಕು. ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಾಡಬೇಕು. ಅದರ ಘಟಕ ಸ್ಥಾಪನೆಗಾಗಿ ಜನವರಿ ಒಂದರೊಳಗೆ ಪಿಡಿಓಗಳು ಸ್ಥಳ ಗುರುತಿಸಿ ಸಂಪೂರ್ಣ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ABOUT THE AUTHOR

...view details