ಚಿಕ್ಕಬಳ್ಳಾಪುರ:ದೇವಸ್ಥಾನದ ಪೂಜಾರಿ ಹಾಗೂ ಅವರ ಶಿಷ್ಯ (priest and his disciple death) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ (Chintamani taluk) ಗುಟ್ಟಹಳ್ಳಿ ದೇವಾಲಯದ ಬಳಿ ನಡೆದಿದೆ.
ಪೂಜಾರಿ ಶ್ರೀಧರ್ ಹಾಗೂ ಶಿಷ್ಯ ಲಕ್ಷ್ಮೀಪತಿ ಎಂಬುವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶ್ರೀಧರ್ ಗುಟ್ಟಹಳ್ಳಿ ಗ್ರಾಮದಲ್ಲಿ (guttahalli village) ಒಂದು ಚಿಕ್ಕ ಗುಡಿ ಕಟ್ಟಿಕೊಂಡಿದ್ದರು. ಇವರನ್ನು ದೈವ ಪುರುಷ ಎಂದೇ ಜನರು ನಂಬಿದ್ದರು ಎನ್ನಲಾಗ್ತಿದೆ. ಅಲ್ಲದೆ, ಇವರ ಮೇಲೆ ನಂಬಿಕೆ ಇರಿಸಿಕೊಂಡಿದ್ದ ಸ್ಥಳೀಯರು ಎರಡು ಎಕರೆ ಜಮೀನು ಬಿಟ್ಟುಕೊಟ್ಟಿದ್ದಲ್ಲದೆ, ಪ್ರತಿ ಶುಕ್ರವಾರ ಹಾಗೂ ಪ್ರತಿ ಅಮಾವಾಸ್ಯೆಯಂದು ಕೊಳಾಲಮ್ಮ ದೇವಿ ಶ್ರೀಧರ್ ಮೈಮೇಲೆ ಬರುತ್ತಾಳೆ ಎಂದು ನಂಬಿದ್ದರು.
ಅಮ್ಮನವರ ಸೇವೆ ಮಾಡುವಂತೆ ತಾಕೀತು?
ಅಲ್ಲದೆ, ಶ್ರೀಧರ್ ಹಾಗೂ ಅವರ ಶಿಷ್ಯ ಕೊಳಾಲಮ್ಮ ದೇವಿ ದೇವಸ್ಥಾನ ನಿರ್ಮಿಸಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರಂತೆ. ಹಲವಾರು ವರ್ಷಗಳಿಂದ ಹೀಗೆ ನಡೆದುಕೊಂಡು ಬಂದಿದ್ದು, ಕಷ್ಟಗಳು ಪರಿಹಾರ ಆಗಬೇಕಾದರೆ 10-15 ದಿನ ಅಮ್ಮನವರ ಸೇವೆ ಮಾಡಬೇಕೆಂದು ಸನ್ನಿಧಿಗೆ ಬರುವ ಮಹಿಳೆಯರು ಹಾಗೂ ಪುರುಷರಿಗೆ ಅಲ್ಲಿಯೇ ಇರುವಂತೆ ಹೇಳುತ್ತಿದ್ದರು. ಈ ಬಗ್ಗೆ ಸ್ಥಳೀಯರಿಗೆ ಹಲವು ಅನುಮಾನ ಮೂಡಿತ್ತು ಎಂದು ಹೇಳಲಾಗ್ತಿದೆ.
ಆದರೆ ಶುಕ್ರವಾರ ರಾತ್ರಿ ಊಟ ಮಾಡಿ ಮಲಗಿದ ಪೂಜಾರಿ ಶ್ರೀಧರ್ ಮತ್ತು ಆತನ ಶಿಷ್ಯ ಲಕ್ಷ್ಮೀಪತಿ, ಇಂದು ಬೆಳಗಿನಜಾವ ನಾಲ್ಕು ಗಂಟೆಗೆ ನೇಣಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.