ಚಿಂತಾಮಣಿ (ಚಿಕ್ಕಬಳ್ಳಾಪುರ):ತಾಲೂಕು ಆಡಳಿತದ ಕೇಂದ್ರ ಕಚೇರಿಗೆ ಅಳವಡಿಸಲಾಗಿದ್ದ ವಿದ್ಯುತ್ ಸಂಪರ್ಕವನ್ನು ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಬಿಲ್ ಬಾಕಿ: ತಾಲೂಕು ಕಚೇರಿಗೂ ತಗುಲಿದ ಕರೆಂಟ್ ಶಾಕ್ - Power cut at Taluk Office in Chintamani
ತಾಲೂಕು ಆಡಳಿತದ ಕೇಂದ್ರ ಕಚೇರಿ ಅಧಿಕಾರಿಗಳು ವಿದ್ಯುತ್ ಬಾಕಿ ಬಿಲ್ಲನ್ನು ಪಾವತಿಸಿ ವಿದ್ಯುತ್ ಸಂಪರ್ಕ ಒದಗಿಸಿಕೊಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಬಿಲ್ ಬಾಕಿ: ತಾಲೂಕು ಕಚೇರಿಗೂ ತಗುಲಿದ ಕರೆಂಟ್ ಶಾಕ್ Chintamani](https://etvbharatimages.akamaized.net/etvbharat/prod-images/768-512-9249829-1005-9249829-1603206398798.jpg)
ತಾಲೂಕಿನ ಮುಖ್ಯ ಆಡಳಿತ ಕಚೇರಿಯಾಗಿರುವ ತಾಲೂಕು ಕಚೇರಿಯಲ್ಲಿ ಬಹುತೇಕ ಸಾರ್ವಜನಿಕ ಕೆಲಸಗಳು ನಡೆಯುತ್ತಿರುತ್ತವೆ. ನಿತ್ಯ ಸರ್ವರ್ ಸಮಸ್ಯೆಗಳು ಎಂದು ಬೇಸರ ಮಾಡಿಕೊಂಡು ಮನೆಗೆ ಹಿಂತಿರಿಗಿರುವುದು ತಿಳಿದಿರುವ ವಿಚಾರ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸಿದ್ದರಿಂದ ಕಂಪ್ಯೂಟರ್ ಮತ್ತು ಇತರ ವಿದ್ಯುನ್ಮಾನ ಯಂತ್ರಗಳು ಸ್ಥಗಿತಗೊಂಡು ಕೆಲಸ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಂತಾಗಿದೆ.
ಸದ್ಯ ಸಂಬಂಧಿಸಿದ ಅಧಿಕಾರಿಗಳು ವಿದ್ಯುತ್ ಬಾಕಿ ಬಿಲ್ ಪಾವತಿಸಿ ವಿದ್ಯುತ್ ಸಂಪರ್ಕ ಒದಗಿಸಿಕೊಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈಟಿವಿ ಭಾರತಗೆ ಬಂದ ಮಾಹಿತಿ ಪ್ರಕಾರ ತಾಲೂಕು ಕಚೇರಿಯು ಸುಮಾರು 1 ಲಕ್ಷಕ್ಕಿಂತ ಹೆಚ್ಚು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ತಿಳಿದು ಬಂದಿದೆ.