ಕರ್ನಾಟಕ

karnataka

ETV Bharat / state

ಕೆಸಿ ವ್ಯಾಲಿ ನೀರಿನ ವಿಚಾರದಲ್ಲಿ ರಾಜಕೀಯ ಸಲ್ಲದು: ಜೆಡಿಎಸ್ ಕಾರ್ಯಕರ್ತರ ಮನವಿ - Politics on the issue of water

ಕೆಸಿ ವ್ಯಾಲಿ ನೀರನ್ನು ಕುರುಟಹಳ್ಳಿ ಕೆರೆಗೆ ಹರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್​ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಂತಾಮಣಿ ಕ್ಷೇತ್ರದ ಶಾಸಕ ಜೆ. ಕೆ. ಕೃಷ್ಣಾರೆಡ್ಡಿ
ಚಿಂತಾಮಣಿ ಕ್ಷೇತ್ರದ ಶಾಸಕ ಜೆ. ಕೆ. ಕೃಷ್ಣಾರೆಡ್ಡಿ

By

Published : May 17, 2020, 10:35 PM IST

ಚಿಕ್ಕಬಳ್ಳಾಪುರ: ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರು ಕೆ.ಸಿ. ವ್ಯಾಲಿ ನೀರನ್ನು ಕುರುಟಹಳ್ಳಿ ಕೆರೆಗೆ ಹರಿಸಬೇಡಿ ಎಂದು ಹೇಳಿಲ್ಲ. ಆದರೆ. ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಸಿ. ವ್ಯಾಲಿಯ ನೀರು ಕುರುಟಹಳ್ಳಿ ಕೆರೆಗೆ ಹರಿದ ನಂತರ ಶಾಸಕರು ಭೇಟಿ ನೀಡಿ, ಕೆರೆ ಪರಿಶೀಲನೆ ಮಾಡಿದ್ದಾರೆ. ಮೊದಲು ಕೆರೆಯನ್ನು ಸ್ವಚ್ಛಗೊಳಿಸಿ ಕೆರೆಯಲ್ಲಿ ಹಲವಾರು ಜನರು ವಾಸವಾಗಿದ್ದಾರೆ. ಅವರನ್ನು ಕೂಡಲೇ ಬೇರೆ ಕಡೆ ಸ್ಥಳಾಂತರಿಸಿದ ಬಳಿಕ ಕೆರೆಗೆ ನೀರು ಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿನಹ ಕೆರೆಗೆ ನೀರು ಹರಿಸುವುದನ್ನು ನಿಲ್ಲಿಸಿ ಎಂದು ಹೇಳಿಲ್ಲ ಎಂಬ ಸ್ಪಷ್ಟನೆ ನೀಡಿದರು.

ಜೆಡಿಎಸ್ ಕಾರ್ಯಕರ್ತರು

ಕೆ.ಸಿ. ವ್ಯಾಲಿ ನೀರಿನ ವಿಚಾರದಲ್ಲಿ ಕೆಲವು ಮುಖಂಡರು ರಾಜಕೀಯ ಮಾಡುತ್ತಿದ್ದಾರೆ. ಶಾಸಕರ ಸೂಚನೆಯ ನಂತರ ಅಧಿಕಾರಿಗಳು ಕೆರೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಕೆಲವರು ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.

ಅಧಿಕಾರಿಗಳು ಅವರನ್ನು ಕೆರೆ ಒತ್ತುವರಿ ಜಾಗದಿಂದ ತೆರವುಗೊಳಿಸಬೇಕು. ಈ ಬಳಿಕವಷ್ಟೇ ನೀರು ಹರಿಸಲು ಮುಂದಾಗಬೇಕು ಎಂದು ಜೆಡಿಎಸ್ ಕಾರ್ಯಕರ್ತ ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ABOUT THE AUTHOR

...view details