ಕರ್ನಾಟಕ

karnataka

ETV Bharat / state

ಮಾಮೂಲಿ ಕೊಡದಿದ್ದಕ್ಕೆ ಹೊಡೆದ್ರು ಅಂತಾ ವೃದ್ಧ ಹೇಳಿದ್ರೆ... ಕರ್ತವ್ಯಕ್ಕೆ ಅಡ್ಡಿಪಡಿಸಿದ್ರು ಅಂತಾರೆ ಪೊಲೀಸರು - undefined

ಮಾಮೂಲಿ ಕೊಡಲಿಲ್ಲವೆಂದು ಪೇದೆ ಥಳಿಸಿದ್ದಾರೆ ಎಂದು ವೃದ್ಧ ಆರೋಪಿಸುತ್ತಿದ್ದಾರೆ. ಆದ್ರೆ ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಪೇದೆಯ ಕರ್ತವ್ಯಕ್ಕೆ ವೃದ್ಧ ಅಡ್ಡಿಪಡಿಸಿದ್ದಾರೆ ಎಂದು ಗುಡಿಬಂಡೆ ಪೊಲೀಸರು ದೂರು ದಾಖಲಿಸಿದ್ದಾರೆ.

ವೃದ್ಧನ ಮೇಲೆ ಪೊಲೀಸಪ್ಪನ ಪ್ರತಾಪ

By

Published : Jun 9, 2019, 1:25 PM IST

Updated : Jun 9, 2019, 1:33 PM IST

ಚಿಕ್ಕಬಳ್ಳಾಪುರ: ಮಾಮೂಲಿ ಕೊಡಲಿಲ್ಲ ಎಂದು ವೃದ್ಧನ ಮೇಲೆ ಪೊಲೀಸ್ ಪೇದೆ ಪ್ರತಾಪ ತೋರಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ.

ಗ್ರಾಮದ ವೃದ್ಧ ನರಸಿಂಹಪ್ಪಗೆ ಪೇದೆ ಮುನಿರಾಜು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.ತಮ್ಮ ಅಂಗಡಿಯಲ್ಲಿ ನರಸಿಂಹಪ್ಪ ಮದ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೇದೆ ಮಾಮೂಲಿ ಪಡೆಯುತ್ತಿದ್ದರಂತೆ. ಹೀಗೆ 13 ಸಾವಿರ ರೂ. ಪಡೆದಿದ್ದಾರಂತೆ. ಮತ್ತೆ ಮಾಮೂಲಿ ಕೊಡಲ್ಲ ಎಂದಾಗ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ವೃದ್ಧನ ಮೇಲೆ ಪೊಲೀಸಪ್ಪನ ಪ್ರತಾಪ?

ಮಾಮೂಲಿ ಕೊಡದ ಕಾರಣ ಪೇದೆ ಮನಬಂದಂತೆ ಥಳಿಸಿದ್ದಾರೆ ಎಂದು ನರಸಿಂಹಪ್ಪ ಮತ್ತು ಅವರ ಸೊಸೆ ಆರೋಪಿಸಿದ್ದಾರೆ.

ಇತ್ತ ಗುಡಿಬಂಡೆ ಪೊಲೀಸರು ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಪೊಲೀಸ್ ಪೇದೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನರಸಿಂಹಪ್ಪನ ಮೇಲೆ ಕೇಸ್ ದಾಖಲಿಸಿದ್ದಾರೆ. ಸದ್ಯ ಪೊಲೀಸ್ ಏಟಿನಿಂದ ಗಾಯಗೊಂಡಿರುವ ನರಸಿಂಹಪ್ಪ ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Last Updated : Jun 9, 2019, 1:33 PM IST

For All Latest Updates

TAGGED:

ABOUT THE AUTHOR

...view details