ಚಿಕ್ಕಬಳ್ಳಾಪುರ:ಶೌಚಗೃಹದ ಜಾಗದಲ್ಲಿ ಗಾಂಜಾ ಬೆಳೆದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೊಲ್ಲರ ಕಾಲೋನಿಯ ವೆಂಕಟೇಶ್ ಬಂಧಿತ ವ್ಯಕ್ತಿ.
ಶೌಚಗೃಹಕ್ಕೆ ಮೀಸಲಿಟ್ಟ ಜಾಗದಲ್ಲಿ ಗಾಂಜಾ ಬೆಳೆದ ವ್ಯಕ್ತಿ ಬಂಧನ - chikkaballapura district ganja news
ಮನೆಯ ಪಕ್ಕದಲ್ಲಿ ಇರುವ ಜಮೀನಿನ 6x6 ಅಡಿ ವಿಸ್ತೀರ್ಣದ ಜಾಗದಲ್ಲಿ ಶೌಚಗೃಹ ನಿರ್ಮಾಣಕ್ಕೆಂದು ಆರೋಪಿ ಕಲ್ಲು ಚಪ್ಪಡಿಗಳನ್ನು ಹಾಕಿದ್ದಾನೆ. ಇದೇ ಜಾಗದಲ್ಲಿ ಗಾಂಜಾ ಸಸಿಗಳನ್ನು ಆತ ಬೆಳೆದಿದ್ದ.

ಆರೋಪಿ ಮನೆಯ ಪಕ್ಕದಲ್ಲೇ ಇರುವ ಜಮೀನಿನ 6x6 ವಿಸ್ತೀರ್ಣದ ಪ್ರದೇಶದಲ್ಲಿ ಶೌಚಾಗೃಹ ನಿರ್ಮಾಣಕ್ಕೆಂದು ಕಲ್ಲು ಚಪ್ಪಡಿಗಳನ್ನು ಹಾಕಿದ್ದಾನೆ. ಅದರಲ್ಲೇ ಈತ ಗಾಂಜಾ ಸಸಿಗಳನ್ನು ಬೆಳೆದಿದ್ದ. ಅಕ್ರಮವಾಗಿ ಮಾದಕ ಪದಾರ್ಥದ ಸಸಿ ಬೆಳೆದ ಬಗ್ಗೆಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ದಾಳಿಗೆ ಧಾವಿಸುವ ಸುಳಿವು ದೊರೆತ ವೆಂಕಟೇಶ್ ಗಾಂಜಾ ಸಸಿಗಳನ್ನು ಕಟಾವು ಮಾಡಿ ಸಮೀಪದ ಜೋಳದ ತೋಟದಲ್ಲಿ ಇಟ್ಟಿದ್ದಾನೆ. ಅಲ್ಲಿಗೂ ಭೇಟಿ ನೀಡಿದ ಪೊಲೀಸರು ಸಸಿಗಳನ್ನು ವಶಪಡಿಸಿಕೊಂಡಿದ್ದಾರೆ.
ಗೌರಿಬಿದನೂರು ವೃತ್ತ ನಿರೀಕ್ಷಕ ರವಿ, ಪಿಎಸ್ಐ ಭಾಸ್ಕರ್, ಮುಖ್ಯ ಪೇದೆ ಶ್ರೀನಿವಾಸಪ್ಪ, ಗ್ರಾಮ ಲೆಕ್ಕಿಗ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.