ಚಿಕ್ಕಬಳ್ಳಾಪುರ:ಪೊಗರು ಚಿತ್ರದ ಯಶಸ್ಸಿನ ಬಳಿಕ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ನಟ ಧ್ರುವ ಸರ್ಜಾರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಧ್ರುವ ಸರ್ಜಾ ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ರುಚಿ - fans who came see Dhruva Sarja
ಜಿಲ್ಲೆಯ ಶಿಡ್ಲಘಟ್ಟದ ವೆಂಕಟೇಶ್ವರ ಚಿತ್ರಮಂದಿರ ಹಾಗೂ ಚಿಕ್ಕಬಳ್ಳಾಪುರದ ಬಾಲಜಿ ಚಿತ್ರಮಂದಿರಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭೇಟಿ ನೀಡುವುದಾಗಿ ಅಭಿಮಾನಿಗಳಿಗೆ ಕರೆ ನೀಡಿದ್ದರು. ಅದರಂತೆ ಶಿಡ್ಲಘಟ್ಟದಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಆಗಮಿಸಿ ನೂಕುನುಗ್ಗಲು ಶುರು ಮಾಡಿದರು. ಇದೇ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿ ತೋರಿಸಿ ಗುಂಪನ್ನು ಚದುರಿಸಿದ್ದಾರೆ.
ಜಿಲ್ಲೆಯ ಶಿಡ್ಲಘಟ್ಟದ ವೆಂಕಟೇಶ್ವರ ಚಿತ್ರಮಂದಿರ ಹಾಗೂ ಚಿಕ್ಕಬಳ್ಳಾಪುರದ ಬಾಲಜಿ ಚಿತ್ರಮಂದಿರಕ್ಕೆ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಭೇಟಿ ನೀಡುವುದಾಗಿ ಅಭಿಮಾನಿಗಳಿಗೆ ಕರೆ ನೀಡಿದ್ದರು. ಅದರಂತೆ ಶಿಡ್ಲಘಟ್ಟದಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಆಗಮಿಸಿ ನೂಕುನುಗ್ಗಲು ಶುರು ಮಾಡಿದರು.
ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿ ತೋರಿಸಿ ಗುಂಪನ್ನು ಚದುರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ವೆಂಕಟೇಶ್ವರ ಚಿತ್ರಮಂದಿರದ ಬಳಿ ನಟ ಧ್ರುವ ಸರ್ಜಾಗೆ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ನೀಡಿದರು. ಆಗ ಧ್ರುವ ತಮ್ಮ ಅಭಿಮಾನಿಗಳಿಗೆ ನಮಸ್ಕರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.