ಕರ್ನಾಟಕ

karnataka

ETV Bharat / state

ಪೆಟ್ರೋಲ್​​ ಬಂಕ್​​ ಸಿಬ್ಬಂದಿ ಸುಲಿಗೆ ಮಾಡಿ ಪರಾರಿ : 24 ಗಂಟೆಯಲ್ಲೇ ಖದೀಮ ಅರೆಸ್ಟ್​​ - latest accused arrested news in chikkaballapur

ಬಂಧಿತ ಆರೋಪಿಯನ್ನು ಈಶ್ವರ್ ಆರ್ ಮಾಡವಾಲ್ (34) ಎಂದು ಗುರುತಿಸಲಾಗಿದೆ. ಈತ ಮೂಲತಃ ಧಾರವಾಡ ಜಿಲ್ಲೆಯವನು ಎಂದು ತಿಳಿದು ಬಂದಿದೆ. ಆರೋಪಿಯು ಬೆಂಗಳೂರಿನ ವಿನಾಯಕ ನಗರದಲ್ಲಿ ವಾಸವಿದ್ದು, ಮೆಡಿಸಿನ್ ವಿತರಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

police arrested accused
ಕಳ್ಳತನ ಆರೋಪಿಯನ್ನು 24 ಗಂಟೆಯಲ್ಲಿ ಅರೆಸ್ಟಟಟ ಮಾಡಿದ ಪೊಲೀಸ್​

By

Published : Jul 11, 2020, 8:51 AM IST

ಚಿಕ್ಕಬಳ್ಳಾಪುರ :ಪೆಟ್ರೋಲ್ ಬಂಕ್​ನಲ್ಲಿ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಿಂದ ಹಣ ದೋಚಿ ಪರಾರಿಯಾಗಲು ಯತ್ನಿಸಿದ್ದ ಕಳ್ಳನನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಈಶ್ವರ್ ಆರ್ ಮಾಡವಾಲ್ (34) ಎಂದು ಗುರುತಿಸಲಾಗಿದೆ. ಈತ ಮೂಲತಃ ಧಾರವಾಡ ಜಿಲ್ಲೆಯವನು ಎಂದು ತಿಳಿದು ಬಂದಿದೆ. ಆರೋಪಿಯು ಬೆಂಗಳೂರಿನ ವಿನಾಯಕ ನಗರದಲ್ಲಿ ವಾಸವಿದ್ದು, ಮೆಡಿಸಿನ್ ವಿತರಕನಾಗಿ ಕೆಲಸ ನಿರ್ವಹಿಸುತ್ತಿದ್ದ.

ಕಳ್ಳತನ ಆರೋಪಿಯನ್ನು 24 ಗಂಟೆಯಲ್ಲಿ ಅರೆಸ್ಟಟಟ ಮಾಡಿದ ಪೊಲೀಸ್​

ಹೈದರಾಬಾದ್ - ಬೆಂಗಳೂರು ರಸ್ತೆಯಲ್ಲಿರುವ ಶ್ರೀಮಾರುತಿ ಎಂಟರ್ ‌ಪ್ರೈಸಸ್ ಪೆಂಟ್ರೋಲ್ ಬಂಕ್‌ನಲ್ಲಿ ರಾತ್ರಿ ಕೆಲಸ ನಿರ್ವಹಿಸುತ್ತಿದ್ದ ವಿನಯ್ (22) ಬಳಿ ಬಾಗೇಪಲ್ಲಿಯಿಂದ ಬಂದ ಕೆಎ-05-ಎಂಎನ್-5638 ಸಂಖ್ಯೆಯ ಬೊಲೆರೋ ವಾಹನದ ಚಾಲಕ 3,630 ರೂಪಾಯಿಗೆ ಡೀಸೆಲ್ ತುಂಬಿಸಿಕೊಂಡು, ಹಣ ಕೊಡದೇ ವಾಹನವನ್ನು ಹಿಂದಕ್ಕೆ ಮುಂದಕ್ಕೆ ಚಲಾಯಿಸಿ ಬಂಕ್ ಸಿಬ್ಬಂದಿ ಬಳಿ ಇದ್ದ 14,000 ಸಾವಿರ ಹಣವನ್ನು ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ.

ಕಳ್ಳತನ ಆರೋಪಿಯನ್ನು 24 ಗಂಟೆಯಲ್ಲಿ ಅರೆಸ್ಟ್​​​ ಮಾಡಿದ ಪೊಲೀಸ್​

ಬಳಿಕ ಸಿಬ್ಬಂದಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಅದರಂತೆ ಎಸ್​ಪಿ ಮಿಥುನ್ ಕುಮಾರ್ ಹಾಗೂ ಉಪವಿಭಾಗದ ಪೊಲೀಸ್ ಉಪಾಧೀಕ್ಷ ರವಿಶಂಕರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ‌ ಕೃತ್ಯಕ್ಕೆ ಬಳಕೆ ಮಾಡಿದ್ದ ವಾಹನ ಹಾಗೂ ಸುಲಿಗೆ ಮಾಡಿದ್ದ 14 ಸಾವಿರ ರೂ. ವಶಪಡಿಸಿಕೊಂಡು ನ್ಯಾಯಲಯಕ್ಕೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಹಿನ್ನೆಲೆ ಪೊಲೀಸ್​​ ಸಿಬ್ಬಂದಿಯನ್ನ ಎಸ್​ಪಿ ಪ್ರಶಂಸಿ, ಬಹುಮಾನವನ್ನೂ ಘೋಷಿಸಿದ್ದಾರೆ.

ABOUT THE AUTHOR

...view details