ದೊಡ್ಡಬಳ್ಳಾಪುರ: ಗೋಡೌನ್ಗಳಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್ ದಾಸ್ತಾನುಗಳ ಮೇಲೆ ದಾಳಿ ನಡೆಸಿದ ದೊಡ್ಡಬಳ್ಳಾಪುರ ನಗರಸಭೆ ಸಿಬ್ಬಂದಿ ಪ್ಲಾಸ್ಟಿಕ್ ಕವರ್ ಮತ್ತು ಲೋಟಗಳನ್ನು ಜಪ್ತಿ ಮಾಡಿದೆ.
ಅಕ್ರಮವಾಗಿ ಪ್ಲಾಸ್ಟಿಕ್ ದಾಸ್ತಾನು: ನಗರಸಭೆಯಿಂದ ಜಪ್ತಿ
ಪ್ಲಾಸ್ಟಿಕ್ ಬಳಕೆ ಮತ್ತು ಕಡಿಮೆ ಮೈಕ್ರಾನ್ ಇರುವ ಪ್ಲಾಸ್ಟಿಕ್ ಬಳಕೆಗೆ ನಗರಸಭೆ ನಿರ್ಬಂಧಿಸಿದೆ. ಆದರೆ, ಅಕ್ರಮವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದು ಇದರಿಂದ ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಕಂಡು ಬಂದಿದೆ.
Plastic inventory illegally at chikballapur
ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಕಡಿಮೆ ಮೈಕ್ರಾನ್ ಇರುವ ಪ್ಲಾಸ್ಟಿಕ್ ಬಳಕೆಗೆ ನಗರಸಭೆ ನಿರ್ಬಂಧಿಸಿದೆ. ಆದರೆ, ಅಕ್ರಮವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದು, ಇದರಿಂದ ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಕಂಡು ಬಂದಿದೆ.
ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿ ನೀರು ಸರಾಗವಾಗಿ ಹರಿಯದೇ ಕಟ್ಟಿಕೊಂಡಿರುವ ಪ್ರಕರಣಗಳು ಸಹ ಹೆಚ್ಚಾಗಿದೆ, ಇದರಿಂದ ಎಚ್ಚೆತ್ತ ನಗರಸಭೆಯ ಪರಿಸರ ವಿಭಾಗದ ಸಿಬ್ಬಂದಿ ಗೋಡೌನ್ ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಪ್ಲಾಸ್ಟಿಕ್ ಲೋಟ ಮತ್ತು ಕವರ್ ಗಳನ್ನ ಜಪ್ತಿ ಮಾಡಿದ್ದಾರೆ.