ಗೌರಿಬಿದನೂರು: 20 ದಿನದ ಹಸುಗೂಸನ್ನು ಪೋಷಕರೇ ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ನಗರಗೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ನಗರಗೆರೆಯ ಬುಡಕಟ್ಟು ಜನಾಂಗದವರಾದ ಗಂಗಣ್ಣ ಮತ್ತು ಮಂಜುಳಾ ದಂಪತಿಗೆ ಕಳೆದ ವಾರ ಗಂಡು ಮಗು ಜನಿಸಿತ್ತು. ಬಳಿಕ ಮಗುವನ್ನು ಬೆಂಗಳೂರು ಮೂಲದವರಿಗೆ ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಓದಿ:ಮದುವೆಯಾದ್ರೂ ಅಧಿಕಾರಿಗಳ ಎಡವಟ್ಟಿಂದ ದೂರವಾದ ನವಜೋಡಿ
ಮಾಹಿತಿ ತಿಳಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕದ ಅಧಿಕಾರಿಗಳು ನಗರಗೆರೆಗೆ ತೆರಳಿ ಪೋಷಕರ ಮನೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗುವನ್ನು ಮಾರಾಟ ಮಾಡಿರುವ ವಿಚಾರ ಖಚಿತವಾಗಿದೆ.
ನಂತರ ಪೊಲೀಸರು ಮಗುವಿನ ಪೋಷಕರನ್ನು ಹಾಗೂ ಮಗುವನ್ನು ಪಡೆದುಕೊಂಡಿದ್ದ ಬೆಂಗಳೂರು ಮೂಲದವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದು, ಮಗುವನ್ನು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಟ್ಟು ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.