ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ಆರೋಪ:  6 ಜನ ಆಸ್ಪತ್ರೆಗೆ ದಾಖಲು - Chikkaballapura crime news

ನೀರಿನ ವಿಚಾರಕ್ಕೆ ಆರಂಭವಾದ ಮಾತುಕತೆ ದೊಣ್ಣೆ, ಕಲ್ಲುಗಳಿಂದ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ ಪರಿಣಾಮ 6 ಜನ ಆಸ್ಪತ್ರೆ ಸೇರುವ ಹಾಗೆ ಮಾಡಿದೆ. ಈ ಪರಸ್ಪರ ಬಡಿದಾಟದ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

Onslaught between two groups
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆ

By

Published : May 7, 2020, 7:51 PM IST

ಚಿಕ್ಕಬಳ್ಳಾಪುರ:ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದು, ದೊಣ್ಣೆ- ಕಲ್ಲುಗಳಿಂದ ಹೊಡೆದಾಡಿಕೊಂಡಿರುವ ಘಟನೆ ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಂಡಹಳ್ಳಿ ಗ್ರಾಮದ ಮುನಿವೆಂಕಪ್ಪ, ಮನು ಹಾಗೂ ಸಹಚರರು ಕೃತ್ಯ ಎಸಗಿದ್ದಾರೆಂದು ಗಾಯಾಳುಗಳು ಆರೋಪಿಸಿದ್ದಾರೆ. ಹಲ್ಲೆಯಿಂದ ಒಂದೇ ಕುಟುಂಬದ ರಾಮಕೃಷ್ಣ, ಮಮತಾ ಸೇರಿದಂತೆ ಒಟ್ಟು 6 ಜನ ಗಾಯಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಕಲ್ಲು, ಕೋಲುಗಳಿಂದ ಹೊಡೆದಾಡಿಕೊಳ್ಳುವವರೆಗೆ ಹೋಗಿದೆ. ದೊಣ್ಣೆಗಳಿಂದ ಹೊಡೆದಾಡುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆ

ಸದ್ಯ ಗಾಯಾಳುಗಳಿಗೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೀರು ಹಿಡಿಯುವ ವಿಚಾರಕ್ಕೆ ಗಲಾಟೆ ಶುರುವಾಗಿದೆ ಎಂದು ಗಾಯಾಳುಗಳು ಹೇಳಿದ್ದಾರೆ.

ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details