ಚಿಕ್ಕಬಳ್ಳಾಪುರ: ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ ವಲಸೆ ಕಾರ್ಮಿಕರೊಬ್ಬರ ಒಂದು ವರ್ಷದ ಮಗುವಿಗೆ ಕೊರೊನಾ ಸೊಂಕು ತಗುಲಿತ್ತು. ಮಗು ಸಂಪೂರ್ಣವಾಗಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
ಮೆ 25 ರಂದು ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೊತೆಗೆ ಮಗುವಿನ ತಂದೆ- ತಾಯಿಗೂ ಕೂಡ ಸೋಂಕು ದೃಢಪಟ್ಟಿತ್ತು.
ಈ ಮಗು ತೀವ್ರ ಅನಿಮಿಯಾ ಸಮಸ್ಯೆಯಿಂದ ಬಳಲುತ್ತಿತ್ತು ಎಂದು ತಿಳಿದು ಬಂದಿದೆ. ಮೊದಲು ಆಸ್ಪತ್ರೆಗೆ ದಾಖಲಾಗಿದ್ದಾಗ 7.4 ಕೆ.ಜಿ ಇದ್ದ ಮಗುವಿನ ತೂಕ ಈಗ 8.7 ಕೆ.ಜಿಗೆ ಹೆಚ್ಚಾಗಿದೆ. ತೀವ್ರ ಅನಾರೋಗ್ಯದ ನಡುವೆಯೂ ಮಹಾಮಾರಿ ಕೊರೊನಾ ಸೋಂಕು ಗೆದ್ದು ಸಂಪೂರ್ಣವಾಗಿ ಗುಣಮುಖವಾಗಿರುವುದಕ್ಕೆ ಆಸ್ಪತ್ರೆ ಸಿಬ್ಬಂದಿ ಗಿಡವನ್ನು ನೀಡಿ ಬೀಳ್ಕೊಟ್ಟಿದ್ದಾರೆ.
ಮಗುವಿನ ತಂದೆ, ತಾಯಿ ಕೂಡ ಸಂಪೂರ್ಣವಾಗಿ ಸೋಂಕಿನಿಂದ ಗುಣಮುಖರಾಗಿದ್ದು, ಇದೀಗ ಮಗು ತಂದೆ, ತಾಯಿಯ ಮಡಿಲು ಸೇರಿಕೊಂಡಿದ್ದಾರೆ. ಜೊತೆಗೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.