ಕರ್ನಾಟಕ

karnataka

ETV Bharat / state

ಗೌರಿಬಿದನೂರಿನಲ್ಲಿ ಮತ್ತೊಂದು ಕೊರೊನಾ ಸೋಂಕು ದೃಢ: ಜನರಲ್ಲಿ ಹೆಚ್ಚಿದ ಆತಂಕ - ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಸೋಂಕು

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಮತ್ತೊಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲಾಡಳಿತ 23 ವರ್ಷದ ಆ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯ ಐಸೊಲೇಷನ್​ ವಾರ್ಡ್​ಗೆ ದಾಖಲಿಸಲಾಗಿದೆ.

one more corona virus confirmed in chikkaballapura
ಮತ್ತೊಂದು ಸೋಂಕು ದೃಢ

By

Published : Apr 8, 2020, 7:10 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ಮತ್ತೊಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲಾಡಳಿತ ಸೇರಿದಂತೆ ಜನರಲ್ಲಿ ಆತಂಕ ಮೂಡಿಸಿದೆ.

ಮತ್ತೊಂದು ಸೋಂಕು ದೃಢ

ದೆಹಲಿಗೆ ಹೋಗಿ ಬಂದಿದ್ದ 23 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಗೌರಿಬಿದನೂರಿನಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದ ಯುವಕನನ್ನು ಜಿಲ್ಲಾಸ್ಪತ್ರೆಯ ಐಸೊಲೇಷನ್​ ವಾರ್ಡ್​ಗೆ ರವಾನಿಸಲಾಗಿದೆ.

ದೆಹಲಿ ನಂಟು ಹೊಂದಿದ್ದ 41 ಮಂದಿ ಶಂಕಿತರು ಹಾಗೂ ಹಿಂದೂಪುರ ವೈದ್ಯನ ಸಂಪರ್ಕದಲ್ಲಿದ್ದ 4 ಶಂಕಿತರ ವರದಿ ಸೇರಿದಂತೆ ಒಟ್ಟು 45 ಮಂದಿ ಶಂಕಿತರ ವರದಿ ಬರುವುದು ಬಾಕಿ ಇದೆ.

ABOUT THE AUTHOR

...view details