ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿಂದು ಮಹಾಮಾರಿ ಸೋಂಕಿಗೆ ಓರ್ವ ಬಲಿಯಾಗಿದ್ದು, ಮೂವರಲ್ಲಿ ಸೋಂಕು ದೃಢಪಟ್ಟಿದೆ.
ಚಿಕ್ಕಬಳ್ಳಾಪುರ: ಸೋಂಕಿಗೆ ಓರ್ವ ಬಲಿ, ಮೂವರಲ್ಲಿ ಸೋಂಕು ದೃಢ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು ಮೂವರಿಗೆ ಸೋಂಕು ದೃಢಪಟ್ಟಿದ್ದು, ಓರ್ವ ವ್ಯಕ್ತಿಯು ಸೋಂಕಿಗೆ ಬಲಿಯಾಗಿದ್ದಾರೆ.
ಚಿಕ್ಕಬಳ್ಳಾಪುರದ 19 ವರ್ಷದ ಯುವತಿ, ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಹಿನ್ನೆಲೆ ಹೊಂದಿರುವ ಚಿಂತಾಮಣಿಯ 32 ವರ್ಷದ ವ್ಯಕ್ತಿ ಹಾಗೂ P-15,400 ಸಂಪರ್ಕದಿಂದ 85 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ಸೊಂಕಿತ P-23,624 ವ್ಯಕ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 268 ಸೋಂಕಿತರು ಪತ್ತೆಯಾಗಿದ್ದು, 197 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 61 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.