ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿಂದು ಮೂರು ವರ್ಷದ ಮಗು ಸೇರಿದಂತೆ 13 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.
ಪ್ರತಿನಿತ್ಯವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇಂದು ಆಂಧ್ರಪ್ರದೇಶದ ನಂಟನ್ನು ಹೊಂದಿದ್ದ 37 ವರ್ಷದ ಪುರುಷ ಹಾಗೂ ಚಿಂತಾಮಣಿಯ P-19831 ಸಂಪರ್ಕದಿಂದ 3 ವರ್ಷದ ಮಗು ಸೇರಿದಂತೆ ಐವರಿಗೆ ಸೊಂಕು ದೃಢಪಟ್ಟಿದೆ. ಶಿಡ್ಲಘಟ್ಟ ವ್ಯಾಪ್ತಿಯ 60 ವರ್ಷದ ಮಹಿಳೆಗೆ ಹಾಗೂ ಬೆಂಗಳೂರು ನಂಟನ್ನು ಹೊಂದಿದ್ದ ಚಿಕ್ಕಬಳ್ಳಾಪುರದ 36 ವರ್ಷದ ಪುರುಷ ಸೇರಿದಂತೆ P-15299 ಸಂಪರ್ಕದಿಂದ 26 ವರ್ಷದ ಮಹಿಳೆ ಹಾಗೂ P-15397 ಸಂಪರ್ಕದಿಂದ 38 ವರ್ಷದ ಮಹಿಳೆ, ಸಿಕೆಬಿ-249 ಸಂಪರ್ಕದಿಂದ ಮೂವರಿಗೆ ಸೋಂಕು ದೃಢಪಟ್ಟಿದೆ.
ಚಿಕ್ಕಬಳ್ಳಾಪುರದ 13 ಮಂದಿಯಲ್ಲಿ ಇಂದು ಸೋಂಕು ಪತ್ತೆ... ಓರ್ವ ಮಹಿಳೆ ಸಾವು! - Chikkaballapur corona news
ಮೂರು ವರ್ಷದ ಮಗು ಸೇರಿದಂತೆ 13 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದ್ದರೆ, 66 ಸಕ್ರಿಯ ಪ್ರಕರಣಗಳಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Chickballapura corona case
ಗೌರಿಬಿದನೂರಿನ 60 ವರ್ಷದ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇಂದು 7 ಜನ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 258ಕ್ಕೆ ಏರಿಯಾಗಿದ್ದರೆ, 66 ಸಕ್ರಿಯ ಪ್ರಕರಣಗಳಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.