ಚಿಕ್ಕಬಳ್ಳಾಪುರ:ಮಳೆ ಹಿನ್ನೆಲೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗುಂಡಾಪುರದ ಅಂಗನವಾಡಿಯಲ್ಲಿ ನೀರು ತುಂಬಿದೆ. ಆದರೆ, ಯಾವುದೇ ಅಧಿಕಾರಿಗಳು ಈ ವರೆಗೂ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಅಂಗನವಾಡಿಯಲ್ಲಿ ನೀರು ತುಂಬಿದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು - ಗುಂಡಾಪುರದ ಅಂಗನವಾಡಿ
ಎರಡು ವರ್ಷದ ಹಿಂದೆಯಷ್ಟೆ ಅಂಗನವಾಡಿ ಪಕ್ಕದಲ್ಲಿರುವ ರಸ್ತೆ ಕಾಮಗಾರಿ ಮಾಡಲಾಗಿದ್ದು, ಮಳೆ ಬಂದಾಗ ಆ ರಸ್ತೆ ಮೇಲೆ ಬೀಳುವ ನೀರೆಲ್ಲಾ ಅಂಗನವಾಡಿಯೊಳಗೆ ನುಗ್ಗುತ್ತಿದೆ. ಜೊತೆಗೆ ಅಂಗನವಾಡಿ ಮೈದಾನದಲ್ಲಿ ನೀರು ನಿಲ್ಲುವುದರಿಂದ, ಇಲ್ಲಿ ಆಟವಾಡುವ ಮಕ್ಕಳು ಹುಷಾರು ತಪ್ಪುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಭಯ ಪಡುತ್ತಿದ್ದಾರೆ.
ಎರಡು ವರ್ಷದ ಹಿಂದೆಯಷ್ಟೆ ಅಂಗನವಾಡಿ ಪಕ್ಕದಲ್ಲಿರುವ ರಸ್ತೆ ಕಾಮಗಾರಿ ಮಾಡಲಾಗಿದ್ದು, ಮಳೆ ಬಂದಾಗ ಆ ರಸ್ತೆ ಮೇಲೆ ಬೀಳುವ ನೀರೆಲ್ಲ ಅಂಗನವಾಡಿಯೊಳಗೆ ನುಗ್ಗುತ್ತಿದೆ. ಜೊತೆಗೆ ಅಂಗನವಾಡಿ ಮೈದಾನದಲ್ಲಿ ನೀರು ನಿಲ್ಲುವುದರಿಂದ, ಇಲ್ಲಿ ಆಟವಾಡುವ ಮಕ್ಕಳು ಹುಷಾರು ತಪ್ಪುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಇತ್ತ ಶಿಕ್ಷಕರೇ ಶಾಲಾ ಕೊಠಡಿಯಿಂದ ನೀರು ಹೊರಕ್ಕೆ ಚೆಲ್ಲಿ ಶಾಲೆಯನ್ನ ಶುಚಿಗೊಳಿಸುತ್ತಿದ್ದಾರೆ.
ಈ ಬಗ್ಗೆ ಅಲ್ಲಿನ ಶಿಕ್ಷಕರನ್ನು ಕೇಳಿದಾಗ ಎರಡು ವರ್ಷದಿಂದ ನಾವು ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ನಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ. ಅಂಗನವಾಡಿಗೆ ಬೀಗ ಹಾಕಿ ಎನ್ನುತ್ತಿದ್ದಾರೆ ಎಂದರು.