ಕರ್ನಾಟಕ

karnataka

ETV Bharat / state

ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆಗೆ ಯತ್ನ:  NSUI ಕಾರ್ಯಕರ್ತರ ಬಂಧನ - ಚಿಕ್ಕಬಳ್ಳಾಪುರ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ವಿರೋಧಿಸಿ​​ ಪ್ರತಿಭಟನೆ ಸುದ್ದಿ

ಪೆಟ್ರೋಲ್ ಬೆಲೆ ಏರಿಕೆ ಹಿನ್ನೆಲೆ ಸಚಿವ ಸುರೇಶ್ ಕುಮಾರ್ ಗೆ ಶಿಡ್ಲಘಟ್ಟದಲ್ಲಿ ಪ್ರತಿಭಟನೆ ಬಿಸಿ ಮುಟ್ಟಿಸಲು ಮುಂದಾಗಿದ್ದ ಎನ್ಎಸ್​​​ಯುಐ ಕಾರ್ಯಕರ್ತರನ್ನು ಇಂದು ಮುಂಜಾನೆ 4:30 ರ ಸುಮಾರಿಗೆ ಬಂಧಿಸಿ ಪೊಲೀಸ್ ಠಾಣೆಗೆ ಕರೆದಕೊಂಡು ಹೋಗಿದ್ದಾರೆ.

NSUI ಕಾರ್ಯಕರ್ತರ ಬಂಧನ
NSUI ಕಾರ್ಯಕರ್ತರ ಬಂಧನ

By

Published : Jun 29, 2020, 12:20 PM IST

ಚಿಕ್ಕಬಳ್ಳಾಪುರ :ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆಗೆ ಸಿದ್ದವಾಗಿದ್ದ ಎನ್ಎಸ್‌ಯುಐ ಕಾರ್ಯಕರ್ತರನ್ನು ಸಚಿವರು ಬರುವುದಕ್ಕೂ ಮುನ್ನವೇ ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.

ಪೆಟ್ರೋಲ್ ಬೆಲೆ ಏರಿಕೆ ಹಿನ್ನೆಲೆ ಸಚಿವ ಸುರೇಶ್ ಕುಮಾರ್​​​ಗೆ ಶಿಡ್ಲಘಟ್ಟದಲ್ಲಿ ಪ್ರತಿಭಟನೆ ಬಿಸಿ ಮುಟ್ಟಿಸಲು ಮುಂದಾಗಿದ್ದ ಎನ್.ಎಸ್.ಯು.ಐ ಕಾರ್ಯಕರ್ತರನ್ನು ಇಂದು ಮುಂಜಾನೆ 4:30 ರ ಸುಮಾರಿಗೆ ಬಂಧಿಸಿ ಪೊಲೀಸ್ ಠಾಣೆಗೆ ಕರೆದಕೊಂಡು ಹೋಗಿದ್ದಾರೆ.

NSUI ಕಾರ್ಯಕರ್ತರ ಬಂಧನ

ಎನ್ಎಸ್‌ಯುಐ ರಾಜ್ಯ ಸಂಚಾಲಕ ಕುದಲಗುರ್ಕಿ ಮುನೇಂದ್ರ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಶಿಡ್ಲಘಟ್ಟ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ದರಾಗಿದ್ದರು. ಇನ್ನು ಇದನ್ನ ಅರಿತ ಬಿಜೆಪಿ ಕಾರ್ಯಕರ್ತರು ಸಚಿವರಿಗೆ ಮಾಹಿತಿ ಮುಟ್ಟಿಸಿ ಸಚಿವರು ಬರುವ ಮೊದಲೇ ಬಂಧಿಸಿ ಪ್ರತಿಭಟನೆ ತಡೆದಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details