ಕರ್ನಾಟಕ

karnataka

ETV Bharat / state

ಬಾಗೇಪಲ್ಲಿ: ಬರಡಾದ ರಸ್ತೆ ವಿಭಜಕ - Bagepalli latest news

ಸದ್ಯ ಶಿವಕುಮಾರ್ ಮತ್ತು ಶಂಕರಪ್ಪ ಎಂಬ ಇಬ್ಬರು ಕೋರ್ಟ್ ಮುಂಭಾಗದಲ್ಲಿ ಕೆಲವು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ, ಅವುಗಳು ನಾಶವಾಗದಂತೆ ಸಂರಕ್ಷಿಸಬೇಕಾಗಿದೆ ಎಂದು ಐವಾರಪಲ್ಲಿ ವೈ.ಎನ್ ಹರೀಶ್ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Road devider
Road devider

By

Published : Jul 2, 2020, 10:10 PM IST

ಚಿಕ್ಕಬಳ್ಳಾಪುರ (ಬಾಗೇಪಲ್ಲಿ):ಈ ಮಳೆಗಾಲದಲ್ಲಾದರೂ ರಸ್ತೆ ವಿಭಜಕದಲ್ಲಿ ಗಿಡ ನೆಟ್ಟು, ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪುರಸಭೆ ಮುಂದಾಗಲಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ಯಾವ ತಾಲೂಕಿನಲ್ಲೂ ಇಲ್ಲದಷ್ಟು ಬೆಟ್ಟ-ಗುಡ್ಡಗಳಿಂದ ಕೂಡಿರುವ ಬಾಗೇಪಲ್ಲಿ ತಾಲೂಕು ಸದ್ಯ ಬರಡಾಗಿ ಕಾಣುತ್ತಿದೆ. ಮಳೆಗಾಲ ಬಂದರೂ ಹಸಿರನ್ನು ಕಾಣುವುದೇ ವಿರಳ, ಸಸ್ಯ ಸಂಪತ್ತು ನಾನಾ ಕಾರಣಗಳಿಂದ ನಶಿಸುತ್ತಲೇ ಇದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ.

ತಾಲೂಕು ಕೇಂದ್ರದ ಮುಖ್ಯ ರಸ್ತೆಯಾದ ಡಿವಿಜಿ ರಸ್ತೆಯ ವಿಭಜಕವು ಎರಡು ಕಿ.ಮೀ ಗೂ ಹೆಚ್ಚು ಉದ್ದವಾಗಿದ್ದು, ಇಂತಹ ರಸ್ತೆ ವಿಭಜಕದ ಮೇಲೆ ಗಿಡಗಳನ್ನು ನೆಟ್ಟು ಸಂರಕ್ಷಿಸುವ ಕೆಲಸವನ್ನು ಮಾಡಬೇಕಿದೆ. .

ಸದ್ಯ ಶಿವಕುಮಾರ್ ಮತ್ತು ಶಂಕರಪ್ಪ ಎಂಬ ಇಬ್ಬರು ಕೋರ್ಟ್ ಮುಂಭಾಗದಲ್ಲಿ ಕೆಲವು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ, ಅವುಗಳು ನಾಶವಾಗದಂತೆ ಸಂರಕ್ಷಿಸಬೇಕಾಗಿದೆ ಎಂದು ಐವಾರಪಲ್ಲಿ ವೈ.ಎನ್ ಹರೀಶ್ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details