ಚಿಕ್ಕಬಳ್ಳಾಪುರ: ವಿದೇಶದಿಂದ ಬಂದ 66 ಜನ ಅವರಾಗಿಯೇ ಆಸ್ಪತ್ರೆಗೆ ಬಂದು ಮಾಹಿತಿ ನೀಡಿದ್ದು, ಅವರಲ್ಲಿ ಕೆಲವರಿಗೆ ಆಸ್ಪತ್ರೆಯಲ್ಲಿ ಮತ್ತು ಮನೆಗಳಲ್ಲಿ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದ್ದು, ಇದುವರೆಗೂ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಲ್ಲೂ ಕೊರೊನಾ ಪತ್ತೆಯಾಗಿಲ್ಲ: ಡಿಸಿ ಸ್ಪಷ್ಟನೆ - ಚಿಕ್ಕಬಳ್ಳಾಪುರ ಕೊರೊನಾ ಪ್ರಕರಣ
ಕೊರೊನಾ ಕುರಿತು ಭಯ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಇದುವರೆಗೂ ಸೋಂಕು ಹರಡಿರುವ ಪ್ರಕರಣಗಳು ಪತ್ತೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆರ್.ಲತಾ ಹೇಳಿದ್ದಾರೆ.
ಜಿಲ್ಲಾಧಿಕಾರಿ ಆರ್. ಲತಾ
ಜಿಲ್ಲೆಯಲ್ಲಿ 21 ಜನರ ಮೇಲೆ 14 ದಿನ ನಿಗಾ ಇಡಲಾಗಿತ್ತು. ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಪತ್ಯೇಕ ನಿಗಾದಲ್ಲಿರುವ 45 ಜನರೂ ಕೂಡಾ ಸುರಕ್ಷಿತರಾಗಿದ್ದಾರೆ. ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಲು ಡಿಹೆಚ್ಒ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದರು.