ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಹೂಳಲು ಸ್ಮಶಾನ ಜಾಗವಿಲ್ಲ, ಹೈವೇಯಲ್ಲಿ ಶವವಿಟ್ಟು ಪ್ರತಿಭಟನೆ - ಚಿಕ್ಕಬಳ್ಳಾಪುರದಲ್ಲಿ ಸ್ಮಶಾನ ಜಾಗದ ಕೊರತೆ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುನಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ (ಚಟ್ಲಪಲ್ಲಿಗಡ್ಡೆ) ಗ್ರಾಮದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಹೂಳಲು ಸ್ಮಶಾನ ಇಲ್ಲದೇ ಇರುವ ಕಾರಣ ಗ್ರಾಮಸ್ಥರು ಕಡಪ ಹೈವೇ ರಸ್ತೆ ಮಧ್ಯದಲ್ಲಿ ಶವವಿಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

protest
ಶವವಿಟ್ಟು ಪ್ರತಿಭಟನೆ

By

Published : Jan 3, 2022, 5:49 PM IST

Updated : Jan 3, 2022, 7:17 PM IST

ಚಿಕ್ಕಬಳ್ಳಾಪುರ:ಮೃತ ವ್ಯಕ್ತಿಯನ್ನು ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದೆ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ರಾಂಪುರ ಗ್ರಾಮದ ಕಡಪ ಹೈವೇಯಲ್ಲಿ ನಡೆದಿದೆ.

ತಾಲ್ಲೂಕಿನ ಮುನಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ (ಚಟ್ಲಪಲ್ಲಿಗಡ್ಡೆ) ಗ್ರಾಮದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಸ್ಮಶಾನ ಇಲ್ಲದೇ ಇರುವ ಕಾರಣ ಗ್ರಾಮಸ್ಥರು ಕಡಪ ಹೈವೇ ರಸ್ತೆ ಮಧ್ಯದಲ್ಲಿ ಶವವಿಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.


ಗ್ರಾಮದಲ್ಲಿ ಎಸ್.ಸಿ ಜನಾಂಗದವರೇ ಹೆಚ್ಚಿದ್ದು, ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದೆ ಇರುವ ಕಾರಣ ಬಹಳ ತೊಂದರೆಯಾಗಿದೆ. ಇದೇ ಕಾರಣಕ್ಕೆ ಗ್ರಾಮಸ್ಥರು ಸುಮಾರು 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ರಸ್ತೆ ತಡೆಯಿಂದ ವಾಹಮ ಸವಾರರು ಪರದಾಡುವಂತಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸರ್ವೆ ಮಾಡಿ ಸ್ಮಶಾನದ ಜಾಗವನ್ನು ಗುರ್ತಿಸಿ ಕೊಡುತ್ತೇವೆ ಎಂದು ಭರವಸೆ ಕೊಟ್ಟ ನಂತರ ಪ್ರತಿಭಟನೆಯನ್ನು ಹಿಂಪಡೆದರು.

2 ವರ್ಷಗಳ ಹಿಂದೆ ಸ್ಮಶಾನಕ್ಕೆಂದು ಸುಮಾರು 1 ಎಕರೆ 9 ಗುಂಟೆ ಪೈಕಿ 25 ಗುಂಟೆ ಜಮೀನನ್ನು ತಾಲ್ಲೂಕು ಕಚೇರಿ ಗುರುತಿಸಿದೆ. ಆದರೆ, ಇಲ್ಲಿಯವರೆಗೂ ಸದರಿ ಜಮೀನನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಸರ್ವೆ ಕಾರ್ಯ ನಡೆಸಿ ಸ್ಮಶಾನಕ್ಕೆ ಜಾಗವನ್ನು ಗುರುತಿಸಿಕೊಡಿ ಎಂದು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಅವರು ಗಮನ ಹರಿಸಿಲ್ಲ ಎಂದು ಗ್ರಾಪಂ ಸದಸ್ಯ ಶ್ರೀನಿವಾಸ್ ದೂರಿದರು.

ಪ್ರತಿಭಟನೆಯಲ್ಲಿ ಸಿ.ವಿ. ವೆಂಕಟರಮಣಪ್ಪ, ಗಂಗುಲಪ್ಪ, ವೆಂಕಟೇಶಪ್ಪ, ಟಿ.ವೆಂಕಟರಮಣಪ್ಪ, ಭಾನುಪ್ರಕಾಶ್, ರಾಮಕೃಷ್ಣ, ಕೃಷ್ಣಪ್ಪ ಇದ್ದರು.

ಇದನ್ನೂ ಓದಿ:ತಾಯಿ ಮೃತದೇಹ ಹೊತ್ತು 4 ಕಿಮೀ ನಡೆದೇ ಸಾಗಿ ಅಂತ್ಯಕ್ರಿಯೆ ನಡೆಸಿದ ಹೆಣ್ಣುಮಕ್ಕಳು

Last Updated : Jan 3, 2022, 7:17 PM IST

ABOUT THE AUTHOR

...view details