ಚಿಕ್ಕಬಳ್ಳಾಪುರ: ಕಳೆದ ಇಪ್ಪತ್ತು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಮರದಹಳ್ಳಿಯಲ್ಲಿ ನಡೆದಿದೆ. ಸಹನಾ (19) ಮೃತಪಟ್ಟ ಯುವತಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರದ ಸಹನಾ ಅವರ ಮದುವೆ ಕಳೆದ ಜೂನ್ 10 ರಂದು ಶಿಡ್ಲಘಟ್ಟದ ಗಜೇಂದ್ರ ಬಾಬು ಎಂಬ ಯುವಕನೊಂದಿಗೆ ನಡೆದಿತ್ತು. ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.