ಚಿಕ್ಕಬಳ್ಳಾಪುರ:ಅರಣ್ಯ ಇಲಾಖೆಯಿಂದ ಬೀಜದುಂಡೆ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು ಮೂವತ್ತು ಸಾವಿರ ಬೀಜಗಳನ್ನೊಳಗೊಂಡ ಉಂಡೆಗಳನ್ನು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಡಿದರು.
ಪರಿಸರ ಕಾಳಜಿ ಮೂಡಿಸಲು ಚಿಕ್ಕಬಳ್ಳಾಪುರದಲ್ಲಿ ಅರಣ್ಯ ಇಲಾಖೆಯಿಂದ ಹೊಸ ಪ್ಲಾನ್ - undefined
ಗಿಡ - ಮರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಅರಣ್ಯ ಮತ್ತು ಸರ್ಕಾರಿ ಜಾಗದಲ್ಲಿ ಬೀಜದುಂಡೆ ಹಾಕಿ, ಮಳೆಗಾಲದಲ್ಲಿ ಬೀಜ ಮೊಳಕೆಯೊಡೆದು ಮರವಾಗಿ ಬೆಳೆಯುವ ದೃಷ್ಟಿಯಿಂದ ಸರ್ಕಾರ ಬೀಜದುಂಡೆ ತಯಾರಿಗೆ ಉತ್ತೇಜನ ಕೊಡುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಕೂಡಾ ಬೀಜದುಂಡೆ ತಯಾರಿಗೆ ಮುಂದಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಸುಮಾರು ಮೂವತ್ತು ಸಾವಿರ ಬೀಜದುಂಡೆಗಳನ್ನು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಡಿದರು.
![ಪರಿಸರ ಕಾಳಜಿ ಮೂಡಿಸಲು ಚಿಕ್ಕಬಳ್ಳಾಪುರದಲ್ಲಿ ಅರಣ್ಯ ಇಲಾಖೆಯಿಂದ ಹೊಸ ಪ್ಲಾನ್](https://etvbharatimages.akamaized.net/etvbharat/prod-images/768-512-3603458-thumbnail-3x2-jay.jpg)
ಚಿಕ್ಕಬಳ್ಳಾಪುರದಲ್ಲಿ ಅರಣ್ಯ ಇಲಾಖೆಯಿಂದ ಹೊಸ ಪ್ಲಾನ್
ವಿದ್ಯಾರ್ಥಿಗಳಿಗೆ ಪಾಠದೊಂದಿಗೆ, ಪರಿಸರದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕಾಡು ಸಂರಕ್ಷಿಸುವ ಈ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಾಕ್ತವಾಗಿದೆ. ಇನ್ನು ಈ ಬೀಜದುಂಡೆ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಅರಣ್ಯ ಮತ್ತು ಸರ್ಕಾರಿ ಜಾಗದಲ್ಲಿ ಬೀಜದುಂಡೆ ಹಾಕಿ, ಮಳೆಗಾಲದಲ್ಲಿ ಬೀಜ ಮೊಳಕೆಯೊಡೆದು ಮರವಾಗಿ ಬೆಳೆಯುವ ದೃಷ್ಟಿಯಿಂದ ಸರ್ಕಾರವೇ ಇದಕ್ಕೆ ಉತ್ತೇಜನ ಕೊಡುತ್ತಿದೆ. ಆದ್ದರಿಂದ ಅರಣ್ಯಾಧಿಕಾರಿಗಳು ಆಯಾ ಪ್ರದೇಶಗಳ ಮಕ್ಕಳ ಕೈಯಲ್ಲಿ ಈ ರೀತಿಯ ಬೀಜದುಂಡೆ ಮಾಡಿಸುತ್ತಿದ್ದಾರೆ.
Last Updated : Jun 19, 2019, 11:07 PM IST