ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ಒಂದೇ ತಿಂಗಳು ಇಬ್ಬರು ಡಿಸಿ ವರ್ಗಾವಣೆ.. ಕೊನೆಗೂ ಬಂದ್ರು ಹೊಸ ಡಿಸಿ - upper DC Arathi anand

ಚಿಕ್ಕಬಳ್ಳಾಪುರ ನೂತನ ಜಿಲ್ಲಾಧಿಕಾರಿಯಾಗಿ ಆರ್. ಲತಾರವರು ಅಧಿಕಾರಿ ಸ್ವಿಕಾರ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳದ್ದೆ ಮೇಲುಗೈ, ಜಿಲ್ಲಾಡಳಿತವನ್ನು ಹೆಚ್ಚಾಗಿ ಮಹಿಳೆಯರೆ ನಡೆಸುತ್ತಿರುವುದು ವಿಶೇಷವಾಗಿದೆ.

ಜಿಲ್ಲಾಧಿಕಾರಿ ಆರ್. ಲತಾ

By

Published : Aug 29, 2019, 10:28 PM IST

ಚಿಕ್ಕಬಳ್ಳಾಪುರ :ಒಂದೇ ತಿಂಗಳಲ್ಲಿ ಇಬ್ಬರು ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿ ಸಾಕಷ್ಟು‌ ಸುದ್ದಿಯಾಗಿದ್ದ ಜಿಲ್ಲೆಗೆ ಕೊನೆಗೂ ಡಿಸಿ ಆಗಿ ಆರ್ ಲತಾ ರವರು ಅಧಿಕಾರ ವಹಿಸಿಕೊಂಡಿದ್ದಾರೆ.

ನೂತನ ಜಿಲ್ಲಾಧಿಕಾರಿಯಾಗಿ ಆರ್. ಲತ ಅಧಿಕಾರ‌ ಸ್ವೀಕಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್. ಲತಾರವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಜಿಲ್ಲೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿದ್ದು ಎರಡು ದಿನಗಳಲ್ಲಿ ತಿಳಿದುಕೊಳ್ಳಲಾಗುವುದು. ಇನ್ನೂ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಅದರ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.

ನೂತನ ಜಿಲ್ಲಾಧಿಕಾರಿಯನ್ನು ಅಪಾರ ಜಿಲ್ಲಾಧಿಕಾರಿ ಆರತಿ‌ ಆನಂದ್ ರವರು ಹೂ ಗುಚ್ಚವನ್ನು ನೀಡಿ ಸ್ವಾಗತಿಸಿದರು. ಜಿಲ್ಲೆಯ ಆಡಳಿತವನ್ನು ಮಹಿಳೆಯರೇ ನಡೆಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಜಿಲ್ಲಾಧಿಕಾರಿಯಾಗಿ ಆರ್ ಲತಾ, ಅಪಾರ ಜಿಲ್ಲಾಧಿಕಾರಿಯಾಗಿ ಆರತಿ ಆನಂದ್, ಸಿಇಓ ಪೌಜಿಯಾ ತರನಂ ಅಧಿಕಾರವನ್ನು ನಡೆಸುತ್ತಿದ್ದಾರೆ.

ABOUT THE AUTHOR

...view details