ಬಾಗೇಪಲ್ಲಿ: ಕೊರೊನಾ ನಿಯಂತ್ರಣಕ್ಕಾಗಿ ಪೌರ ಕಾರ್ಮಿಕರು ಶ್ರಮಿಸುತ್ತಿರುವ ಹಿನ್ನೆಲೆ 11 ನೇ ವಾರ್ಡ್ನ ಕೆಪಿಸಿಸಿ ವಕ್ತಾರರಾದ ನಜರತ್ ಬೇಗಂ ಅವರು ಇಂದು ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದರು.
ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದ ಕೆಪಿಸಿಸಿ ವಕ್ತಾರರಾದ ನಜರತ್ ಬೇಗಂ - ಕೊರೊನಾ ನಿಯಂತ್ರಣಕ್ಕಾಗಿ ಪೌರ ಕಾರ್ಮಿಕರ ಶ್ರಮ ನ್ಯೂಸ್
ಪೌರ ಕಾರ್ಮಿಕರು ಪ್ರತಿ ಮನೆ, ರಸ್ತೆಗಳಿಗೆ ಹೋಗಿ ಕಸವನ್ನು ತೆಗೆದುಕೊಂಡು ಸ್ವಚ್ಛತೆ ಮಾಡುತ್ತಿದ್ದು, ಕೆಪಿಸಿಸಿ ವಕ್ತಾರರಾದ ನಜರತ್ ಬೇಗಂ ಬಾಗೇಪಲ್ಲಿಯಲ್ಲಿರುವ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದರು.

ಕೆಪಿಸಿಸಿ ವಕ್ತಾರ ನಜರತ್ ಬೇಗಂ
ಪೌರ ಕಾರ್ಮಿಕರು ಪ್ರತಿ ಮನೆ, ರಸ್ತೆಗಳಿಗೆ ಹೋಗಿ ಕಸವನ್ನು ತೆಗೆದುಕೊಂಡು ಸ್ವಚ್ಛತೆ ಮಾಡುತ್ತಾರೆ. ಹೀಗಾಗಿ ಪೌರ ಕಾರ್ಮಿಕರು ರಿಯಲ್ ಕೊರೊನಾ ವಾರಿಯರ್ಸ್ ಎಂದು ಬಾಗೇಪಲ್ಲಿ ಪಟ್ಟಣದ ಕಾರ್ಮಿಕರಿಗೆ ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನ ಮಾಡಿದರು. ಈ ವೇಳೆ ಅಲ್ಲಿನ ಜನರು ಮನೆಯೊಳಗೆ ನಿಂತುಕೊಂಡು ಕಾರ್ಮಿಕರಿಗೆ ಚಪ್ಪಾಳೆ ತಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು. ಜೊತೆಗೆ ಕೆಲ ಸ್ಥಳೀಯರು ಸಹ ಸನ್ಮಾನ ಮಾಡಿದರು.
TAGGED:
corona effect in state