ಚಿಂತಾಮಣಿ :ತಾಲೂಕಿನ ತಳಗವಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2019-20ನೇ ಸಾಲಿನಲ್ಲಿ ನಡೆದಿರುವ ಕಾಮಗಾರಿಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ.
ನರೇಗಾ ಯೋಜನೆ ಕಾಮಗಾರಿ ಕಳಪೆ ಎಂಬ ಆರೋಪ - Chintamani of Chikkaballapur district
ಕಾಮಗಾರಿ ಮುಗಿದು ಇನ್ನೂ ಕೆಲವು ತಿಂಗಳು ಕೂಡ ಆಗಲಿಲ್ಲ. ಆಗಲೇ ಗೋಕುಂಟೆ ಸಂಪೂರ್ಣವಾಗಿ ಹಾಳಾಗಿದೆ..
ಚಿಂತಾಮಣಿಯಲ್ಲಿ ನರೇಗಾ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರ ಆರೋಪ
ಕಾಪುರ ಸರ್ಕಾರಿ ಶಾಲೆಯ ಸಮೀಪ ಸುಮಾರು ಐದು ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಗೋಕುಂಟೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಸರ್ಕಾರದಿಂದ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಮತ್ತು ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸಲು ಲಕ್ಷಾಂತರ ರೂಪಾಯಿ ಹಣ ಬಿಡುಗಡೆಯಾಗುತ್ತದೆ.
ಕಾಮಗಾರಿ ಮುಗಿದು ಇನ್ನೂ ಕೆಲವು ತಿಂಗಳು ಕೂಡ ಆಗಲಿಲ್ಲ. ಆಗಲೇ ಗೋಕುಂಟೆ ಸಂಪೂರ್ಣವಾಗಿ ಹಾಳಾಗಿದೆ. ಸದ್ಯ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಮೇಲೆ ಕಾನೂನು ರೀತಿ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.