ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಹೆಚ್‌ಟಿಯುಜಿ ಕೇಬಲ್ ಕಳ್ಳನ ಬಂಧನ - Nandi giridhama police station

ಹೆಚ್‌ಟಿಯುಜಿ ಕೇಬಲ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ನಂದಿಗಿರಿಧಾಮ ಪೊಲೀಸರು ಬಂಧಿಸಿದ್ದಾರೆ.

Chikkaballapura
Chikkaballapura

By

Published : Aug 12, 2020, 4:48 PM IST

ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಾಬಾವೊಂದರ ಪಕ್ಕದಲ್ಲಿದ್ದ ಹೆಚ್‌ಟಿಯುಜಿ ಕೇಬಲ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಂದಿ ಗಿರಿಧಾಮ ಪೊಲೀಸರು ಯಶಸ್ವಿಯಾಗಿದ್ದಾರೆ.

ಹರೀಶ್ (28), ಶಿವಕುಮಾರ್ ಕಲ್ಲುಕುಂಟೆ (32) ಹಾಗೂ ಶಿವಾನಂದ ಮೊಗಳಗುಪ್ಪೆ (22) ಬಂಧಿತರಾಗಿದ್ದಾರೆ. ಇವರಿಂದ 2.25 ಲಕ್ಷ ರೂ ನಗದು ಹಾಗೂ ಎರಡು ದ್ವಿಚಕ್ರ ವಾಹನ ಹಾಗೂ 25 ಸಾವಿರ ರೂ ಮೌಲ್ಯದ ಹೆಚ್‌ಟಿಯುಜಿ ಕೇಬಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಕೋಲಾರ ತಾಲೂಕಿನ ಧನಮಟ್ಟನಹಳ್ಳಿ ಗ್ರಾಮದ ವಿದ್ಯುತ್ ಗುತ್ತಿಗೆದಾರ ಮಂಜುನಾಥ್‌, ಚಿಕ್ಕಬಳ್ಳಾಪುರದ ಹೆದ್ದಾರಿ-7 ರ ಪಕ್ಕದ ಕೀರ್ತಿ ಪಂಜಾಬಿ ಡಾಬಾ ಪಕ್ಕದಲ್ಲಿ ಹೆಚ್‌ಟಿಯುಜಿ ಕೇಬಲ್‌ಗಳನ್ನು ಇಟ್ಟಿದ್ದ ವೇಳೆ ಕಳ್ಳತನವಾಗಿದ್ದು ನಂತರ ನಂದಿ ಗಿರಿಧಾಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಹಾಗೂ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.

ABOUT THE AUTHOR

...view details