ಚಿಕ್ಕಬಳ್ಳಾಪುರ :ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾ ಸ್ಥಳವಾದ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕೊರೊನಾ ನಡುವೆಯೂ 20 ಲಕ್ಷ ರೂ. ಹಣ ಸಂಗ್ರಹವಾಗಿದೆ.
ಕಳೆದ 1 ವರ್ಷದ ಹಿಂದೆ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ₹29.36 ಲಕ್ಷ ಹಣ ಸಂಗ್ರಹವಾಗಿತ್ತು. ಆದ್ರೆ, ಲಾಕ್ಡೌನ್ ಘೋಷಣೆಯಾದ ನಂತರ ದರ್ಗಾ ಬಾಗಿಲು 4 ತಿಂಗಳಿಗೂ ಅಧಿಕ ಬಂದ್ ಮಾಡಲಾಗಿತ್ತು. ಸದ್ಯ ಲಾಕ್ಡೌನ್ ನಡುವೆಯೂ ದರ್ಗಾದ ಹಣ ದಾಖಲೆ ಮೊತ್ತದಲ್ಲಿ ಸಂಗ್ರಹವಾಗಿದೆ.