ಚಿಕ್ಕಬಳ್ಳಾಪುರ: ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಠಾಣೆ ಮುಂಭಾಗ ನಡೆದಿದೆ.
ಶಿಡ್ಲಘಟ್ಟ ಠಾಣೆಯ ಮುಂಭಾಗದಲ್ಲಿಯೇ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ! ಅಜಾದ್ ನಗರದ ನಿವಾಸಿ ಅಮ್ಜದ್ ನವಾಸ್ (32) ಕೊಲೆಯಾದ ವ್ಯಕ್ತಿ. ಸದ್ಯ ಈತ ತಾಲೂಕಿನ ಕಾಂಗ್ರೆಸ್ ಮೈನಾರಿಟಿ ಅಧ್ಯಕ್ಷನಾಗಿದ್ದ. ಈ ಹಿಂದೆ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ ಈತ ಬಳಿಕ ಎಲ್ಲವನ್ನೂ ಬಿಟ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದ.
ಇಂದು ಮಧ್ಯಾಹ್ನ ಶಿಡ್ಲಘಟ್ಟ ನಗರದ ಪೊಲೀಸ್ ಠಾಣೆಯ ಮುಂಭಾಗ ಹೋಗುವ ವೇಳೆ ಓಮಿನಿಯಲ್ಲಿ ಬಂದ ಮೂವರು ದುಷ್ಕರ್ಮಿಗಳು ಠಾಣೆಯ ಮುಂಭಾಗ ಸ್ಕೂಟಿಗೆ ಡಿಕ್ಕಿ ಹೊಡೆದು ಬಳಿಕ ಮಚ್ಚಿನಿಂದ ಕೊಲೆ ಮಾಡಿದ್ದಾರೆ. ಅಷ್ಟರ ಒಳಗೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದು, ಕಾರಿನಲ್ಲಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಶಿಡ್ಲಘಟ್ಟ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಓದಿ:ಪೊಲೀಸರ ನಿರ್ಲಕ್ಷ್ಯದಿಂದ ಕೊಲೆ ಆರೋಪಿಯನ್ನು ಕೊಂದ ಸ್ಥಳೀಯರು : ಜಾರ್ಖಂಡ್ನಲ್ಲಿ ಘಟನೆ