ಚಿಕ್ಕಬಳ್ಳಾಪುರ:ಚಾಕುವಿನಿಂದ ವ್ಯಕ್ತಿಯ ಮರ್ಮಾಂಗ ಸೇರಿದಂತೆ ದೇಹದ 20 ಕ್ಕೂ ಹೆಚ್ಚು ಭಾಗಗಳಲ್ಲಿ ಚುಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯ ದರ್ಗಾ ಬಳಿಯ ಹೊಲದಲ್ಲಿ ನಡೆದಿದೆ.
ಮೃತ ಯುವಕನನ್ನು ನಗರದ ಶರೀಫ್ ಎಂಬುವವರ ಮಗ ಇಮ್ರಾನ್ ಖಾನ್ (25) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದು, ಕೆಎಸ್ಆರ್ಟಿಸಿ ಡಿಪೋ ಬಳಿ ವೆಲ್ಡಿಂಗ್ ಶಾಪ್ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ.