ಚಿಕ್ಕಬಳ್ಳಾಪುರ:ಕಳ್ಳತನ ಮಾಡಿರುವ ವಸ್ತುಗಳ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಚಾಕುವಿನಿಂದ ಕತ್ತಿಗೆಗೆ ಇರಿದು ಸ್ನೇಹಿತನ ಬರ್ಬರ ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆದ ಘಟನೆ ಜಿಲ್ಲೆಯ ನೂತನ ತಾಲೂಕು ಚೇಳೂರುನಲ್ಲಿ ನಡೆದಿದೆ. ನಾಸಿರ್ (24) ಕೊಲೆಯಾದ ಯುವಕನಾಗಿದ್ದಾನೆ. ಚೇಳೂರು ನಿವಾಸಿ ಸೋನು (ಸಯೈದ್)(20) ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ನಾಸೀರ್ ಹಾಗೂ ಸಯೈದ್ ಇಬ್ಬರು ಸ್ನೇಹಿತರಾಗಿದ್ದರು. ಇನ್ನೂ ಕಳೆದ ತಿಂಗಳುಗಳ ಹಿಂದೆ ಆಂಧ್ರಪ್ರದೇಶದ ತಿರುಪತಿಯ ಅಲಿಪಿರಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಂಧಿತರಾಗಿದ್ದರು. ಆದರೆ, ಸಯೈದ್ ಪೋಷಕರು ಬೇಲ್ ಮೇಲೆ ಬಿಡುಗಡೆ ಮಾಡಿಕೊಂಡು ಬಂದಿದ್ದರು. ನಾಸಿರ್ ಅನಾಥವಾದ ಹಿನ್ನೆಲೆ ಬೇಲ್ ಸಿಗದೇ ಜೈಲಿನಲ್ಲೇ ಉಳಿದು ಕೊಂಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೇ ಗಲಾಟೆಯೂ ನಡೆದಿತ್ತು.