ಚಿಕ್ಕಬಳ್ಳಾಪುರ:ಚಿಂತಾಮಣಿ ತಾಲೂಕಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರನ್ನು ಸಂಸದ ಮುನಿಸ್ವಾಮಿ ಭೇಟಿ ಮಾಡಿ ಧೈರ್ಯ ತುಂಬಿದರು.
ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಂಸದ ಮುನಿಸ್ವಾಮಿ ಕಳೆದೆರಡು ವರ್ಷಗಳ ಹಿಂದೆ ತಾಲೂಕಿನ ಮುರುಗಮಲ ಗ್ರಾಮದ ಬಳಿ ಭೀಕರ ಅಪಘಾತದಲ್ಲಿ 11 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು. ಮತ್ತೀಗ ಆರ್‌ಟಿಒ ಪೊಲೀಸ್ ಇಲಾಖೆ ಅಧಿಕಾರಿಗಳ ಬೇಜಾವ್ದಾರಿತನದಿಂದ 8 ಜನ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟು ದಿನದಿಂದ ಏನು ಮಾಡುತ್ತಿದ್ದೀರಾ ಎಂದು ತರಾಟೆಗೆ ತಗೆದುಕೊಂಡರು.
ಕೆಲಸ ಮಾಡುವ ಯೋಗ್ಯತೆ ಇಲ್ಲವೆಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಈ ರೀತಿ ಬಡವರ ಪ್ರಾಣದ ಜೊತೆ ಏಕೆ ಚೆಲ್ಲಾಟ ಆಡುತ್ತೀರಿ?, ಪರ್ಮಿಟ್ ಇಲ್ಲದ ವಾಹನಗಳಿಗೆ ರಸ್ತೆಗೆ ಇಳಿಯಲು ಯಾಕೆ ಅನುಮತಿ ಕೊಟ್ಟಿದ್ದೀರಿ?, ನಿಮ್ಮ ಮನೆಯಲ್ಲಿ ಯಾರಿಗಾದ್ರು ಈ ರೀತಿ ಆಗಿದ್ರೆ ಏನು ಮಾಡುತ್ತಿದ್ರಿ, ಇನ್ಮುಂದೆ ಪರ್ಮಿಟ್ ಇಲ್ಲದ ವಾಹನಗಳು ರಸ್ತೆಗೆ ಇಳಿಸುವಂತಿಲ್ಲ. ಯಾವ ಭಾಗಕ್ಕೆ ಬಸ್‌ಗಳ ಕೊರತೆ ಇದೆ ಎಂಬುವುದನ್ನು ತಿಳಿಸಿ ಎಂದು ಗರಂ ಆದರು.
ಇದನ್ನೂಓದಿ: ಚಿಕ್ಕಬಳ್ಳಾಪುರ: ಲಾರಿ- ಜೀಪ್ ನಡುವೆ ಭೀಕರ ಅಪಘಾತ, 7 ಸಾವು, ಐವರು ಗಂಭೀರ