ಚಿಕ್ಕಬಳ್ಳಾಪುರ: ಸಿಎಂ ಬಿಎಸ್ವೈ ವಿದೇಶ ಪ್ರವಾಸ, ಕೆಲವು ಕಾರ್ಯಕ್ರಮಗಳ ಒತ್ತಡದಿಂದ ಸಚಿವ ಸ್ಥಾನ ತಡವಾಗಿದೆ. ದೆಹಲಿಗೆ ಹೋಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಫೈನಲ್ ಮಾಡಿಕೊಂಡು ಬರಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರ: ಸೋತವರಿಗೂ ಸಚಿವ ಸ್ಥಾನ ಸಿಗಬಹುದು ಅಂದ್ರು ಬಚ್ಚೇಗೌಡ
ಸಿಎಂ ಬಿಎಸ್ವೈ ವಿದೇಶ ಪ್ರವಾಸ, ಕೆಲವು ಕಾರ್ಯಕ್ರಮಗಳ ಒತ್ತಡದಿಂದ ಸಚಿವ ಸ್ಥಾನ ತಡವಾಗಿದೆ. ದೆಹಲಿಗೆ ಹೋಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಫೈನಲ್ ಮಾಡಿಕೊಂಡು ಬರಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.
MP Bachegowda's
ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸೋತವರಿಗೆ ಮಂತ್ರಿಸ್ಥಾನ ಕೊಡುವ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು, ಸೋತವರಿಗೂ ಸಚಿವ ಸ್ಥಾನ ನೀಡಬಹುದು. ಎಂಎಲ್ಸಿ ಮಾಡಿ ಸಚಿವನ್ನಾಗಿ ಮಾಡಬಹುದು. ಆರ್.ಶಂಕರ್ ಆಕಾಂಕ್ಷಿ ಇದ್ದಾರೆ. ಸವದಿಗೂ ಎಂಎಲ್ಸಿ ಮಾಡಬೇಕಿದೆ. ಈ ಎಲ್ಲ ಸಮಸ್ಯೆಗಳನ್ನು ಸಿಎಂ ಅವರೇ ಬಗೆಹರಿಸಬೇಕಿದೆ. ಮುಖ್ಯಮಂತ್ರಿ ಬಿಎಸ್ವೈಗೆ ಕಾರ್ಯನಿಮಿತ್ತ ಒತ್ತಡ ಇರುವ ಕಾರಣ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂದು ಸಮರ್ಥಿಸಿಕೊಂಡರು.